ರೈಲ್ವೆ ಪ್ರಯಾಣಿಕರ ದೂರಿಗಾಗಿ ಒಂದೇ ನಂಬರ್!

0
140

ಹೊಸದಿಲ್ಲಿ: ರೈಲು ಪ್ರಯಾಣಿಕರು ತಮ್ಮ ಸಮಸ್ಯೆ ಮತ್ತು ದೂರುಗಳಿಗೆ ವಿವಿಧ ಸಂಖ್ಯೆಗಳಿಗೆ ಕರೆ ಮಾಡುವ ಬದಲಿಗೆ 139ಕ್ಕೆ ಕರೆ ಮಾಡಿದರೆ ಅಗತ್ಯ ನೆರವು ಒದಗಿಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಪ್ರಯಾಣಿಕರು ತಮ್ಮ ದೂರುಗಳನ್ನು ಸಲ್ಲಿಸಲು ಅನೇಕ ಸಂಖ್ಯೆಗಳಿದ್ದವು. ಈಗ ಅವುಗಳನ್ನೆಲ್ಲ ಬದಿಗಿರಿಸಿ 139 ಅನ್ನು ಏಕಮೇವ ಸಂಖ್ಯೆ ಮಾಡಲಾಗಿದೆ. ಈ ಸಂಖ್ಯೆಗೆ ಕರೆ ಮಾಡಿದರೆ ಅದು ರೈಲ್ವೆ ತ್ವರಿತ ದೂರು ವಿಲೇವಾರಿ ಘಟಕವನ್ನು ಸಂಪರ್ಕಿಸಿ ಪ್ರಯಾಣಿಕರಿಗೆ ಅಗತ್ಯ ನೆರವು ಒದಗಿಸಲಾಗುವುದು. ಈ ಹಿಂದೆ ರೈಲ್ವೆ ಸುರಕ್ಷತೆಗೆ ಸಂಬಂಧಿಸಿದಂತೆ ದೂರು ನೀಡಲು ಚಾಲ್ತಿಯಲ್ಲಿದ್ದ 182 ಸಂಖ್ಯೆಯನ್ನು ಹಾಗೇ ಇರಿಸಲಾಗಿದೆ.

ಸಹಾಯವಾಣಿ ಸಂಖ್ಯೆಗಳಾದ 138 (ಸಾಮಾನ್ಯ ದೂರು), 1072 (ಅಪಘಾತ ಮತ್ತು ಸರಕ್ಷತೆ), 9717630982 (ಎಸ್ ಎಂಎಸ್ ದೂರು), 58888/138 (ಬೋಗಿ ಸ್ವಚ್ಛಗೊಳಿಸುವುದಕ್ಕೆ), 1800111321 (ಕ್ಯಾಟರಿಂಗ್ ಸೇವೆಗಳಿಗಾಗಿ) ಸಂಖ್ಯೆಗಳು ಇನ್ನೂ ಮುಂದೆ ಕಾರ್ಯ ನಿರ್ವಹಿಸುವುದಿಲ್ಲ.

139 ಸಹಾಯವಾಣಿ 12 ಭಾಷೆಗಳಲ್ಲಿ ಲಭ್ಯವಿದೆ. ಇದು ಸ್ವಯಂಚಾಲಿತ ಧ್ವನಿ ಪ್ರತಿಕ್ರಿಯೆ ವ್ಯವಸ್ಥೆ ಹೊಂದಿದೆ.

LEAVE A REPLY

Please enter your comment!
Please enter your name here