ರೈಲ್ವೇ ಸಂಚಾರ ಸ್ಥಗಿತ: ಏ.14ರವರೆಗೆ ದೇಶದಲ್ಲಿ ರೈಲ್ವೇ ಬಂದ್!!

0
94

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಕಾಲ ದೇಶವನ್ನು ಲಾಕ್ ಡೌನ್ ಮಾಡುವುದಾಗಿ ಘೋಷಿದ ಬೆನ್ನಲ್ಲೇ ರೈಲ್ವೇ ಸಂಚಾರವನ್ನು ಏ.14ರವರೆಗೂ ಸ್ಥಗಿತಗೊಳಿಸಿರುವುದಾಗಿ ಭಾರತೀಯ ರೈಲ್ವೇ ಇಲಾಖೆ ಪ್ರಕಟಣೆ ತಿಳಿಸಿದೆ.

ಈಗಾಗಲೇ ಮಾ.22ರಿಂದ ರೈಲು ಸಂಚಾರ ಸ್ಥಗಿತಗೊಂಡಿದ್ದು, ಇದೀಗ ರೈಲು ಸಂಚಾರವನ್ನು ಏ.14ರವರೆಗೆ ಬಂದ್ ಮಾಡಲಾಗಿದೆ. ಸದ್ಯ ದೇಶದಲ್ಲಿ ಕೇವಲ ಸರಕು ಸಾಗಾಣೆ ಮಾಡುವ ಗೂಡ್ಸ್ ರೈಲುಗಳು ಸಂಚಾರ ನಡೆಸುತ್ತಿದ್ದು, ಈ ರೈಲುಗಳ ಸಂಚಾರದಲ್ಲಿ ವ್ಯತ್ಯಾಸ ಇರುವುದಿಲ್ಲ. ಪ್ರಯಾಣಿಕರ ರೈಲುಗಳನ್ನು ಮಾತ್ರವೇ ಬಂದ್ ಮಾಡಾಗಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

ಪ್ರಯಾಣಿಕರು ಟಿಕೆಟ್ ಗಳನ್ನು ಮುಂಚಿತವಾಗಿಯೇ ಬುಕ್ ಮಾಡಿದ್ದರೆ, ಅವರ ಟಿಕೆಟ್ ಹಣವನ್ನು ಬುಕ್ಕಿಂಗ್ ಮಾಡಿದ ಖಾತೆಗೆ ಜಮೆ ಮಾಡಲಾಗುವುದು ಎಂದು ಐ.ಆರ್.ಸಿ.ಟಿ.ಸಿ(Indian Railway Catering and Tourism Corporation) ಹೇಳಿದೆ.

LEAVE A REPLY

Please enter your comment!
Please enter your name here