Monday, August 8, 2022

Latest Posts

ರೋಗಿಯ ಜೀವ ಉಳಿಸಲು ತನ್ನ ಜೀವ ಪಣವಾಗಿಟ್ಟು ಸುಮಾರು ಎರಡು ಕಿಲೋಮೀಟರ್ ಓಡಿದ ಪೊಲೀಸ್!

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ಆಂಬುಲೆನ್ಸ್ ಗೆ ಹಾದಿ ಸುಗಮಗೊಳಿಸಲು ಟ್ರಾಫಿಕ್ ಕಾನ್‌ಸ್ಟೇಬಲ್ ಸುಮಾರು ಎರಡು ಕಿಮೀ ದೂರ ರಸ್ತೆಯಲ್ಲಿ ಓಡಿದ ಘಟನೆ ನಡೆದಿದ್ದು, ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ಗೊಂಡು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.
ಘಟನೆ ನಡೆದದ್ದು ಹೈದರಾಬಾದ್ ನಗರದಲ್ಲಿ. ಇಲ್ಲಿನ ಅಬಿದ್ಸ್ ಪ್ರದೇಶದಿಂದ ಕೋಟಿ ಪ್ರದೇಶದತ್ತ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯೊಬ್ಬರನ್ನು ಅಂಬ್ಯುಲೆನ್ಸ್ ಮೂಲಕ ಕರೆದೊಯ್ಯಲಾಗುತ್ತಿತ್ತು. ಆದರೆ ಟ್ರಾಫಿಕ್ ಸಮಸ್ಯೆಯಿಂದಾಗಿ ತುರ್ತಾಗಿ ತೆರಳಲು ಸಾಧ್ಯವಾಗದ್ದನ್ನು ಕಂಡ ಪೊಲೀಸ್ ಸಿಬ್ಬಂದಿ ಜಿ ಬಾಬ್ಜಿ ಎಂಬವರು ಅಂಬ್ಯುಲೆನ್ಸ್ ಮುಂದೆ ಓಡುತ್ತಾ ಆ ವಾಹನಕ್ಕೆ ಹಾದಿ ಸುಗಮ ಮಾಡಿಕೊಟ್ಟಿದ್ದಾರೆ.
ವೀಡಿಯೋ ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಟ್ರಾಫಿಕ್ ಕಾನ್ಸಸ್ಟೇಬಲ್ ಅವರ ಕಾರ್ಯವನ್ನು ಶ್ಲಾಘಿಸಿ ಹೈದರಾಬಾದ್‌ನ ಎಸಿಪಿ (ಟ್ರಾಫಿಕ್) ಅನಿಲ್ ಕುಮಾರ್ ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ. ಜೊತೆಗೆ ಜನತೆಯೂ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss