ಕಬ್ಬಿನ ಹಾಲು ಯಾರಿಗೆ ಇಷ್ಟವಿಲ್ಲ ಹೇಳಿ. ಎಲ್ಲರಿಗೂ ಕಬ್ಬಿನ ಹಾಲು ಎಂದರೆ ಪಂಚಪ್ರಾಣ. ಕಬ್ಬಿನ ಹಾಲಿನಲ್ಲಿ ಕಾರ್ಬೋಹೈಡ್ರೇಟುಗಳು, ಪ್ರೋಟಿನ್, ಗಂಧಕ, ಕ್ಯಾಲ್ಸಿಯಂ, ಕಬ್ಬಿಣ, ಖನಿಜ ಹೀಗೆ ಹತ್ತಾರು ಪೋಷಕಾಂಶಗಳು ಕಬ್ಬಿನಲ್ಲಿದೆ. ವಾರಕ್ಕೆ ಒಮ್ಮೆ ಕಬ್ಬಿನ ಹಾಲನ್ನು ಸೇವಿಸಿದರೂ ಸಾಕು ಆರೋಗ್ಯವಾಗಿರಲು.
- ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಕಬ್ಬಿನ ಹಾಲಿನ ಮಹತ್ವ ದೊಡ್ಡದಿದೆ. ಇದರಲ್ಲಿ ಇರುವ ಆಂಟಿ ಆಕ್ಸಿಡೆಂಟ್ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಾರಕ್ಕೆ ಒಮ್ಮೆಯಾದರೂ ಕಬ್ಬಿನ ಹಾಲು ಸೇವಿಸಿ.
- ಕಾಮಾಲೆ ರೋಗ ಬರದಂತೆ ತಡೆಯುತ್ತದೆ. ನಿಯಮಿತವಾಗಿ ಕಬ್ಬಿನ ಹಾಲನ್ನು ಸೇವಿಸಿದರೆ ಕಾಮಾಲೆ ರೋಗ ಬರುವುದಿಲ್ಲ. ಕಬ್ಬಿನಲ್ಲಿ ಇರುವ ಗುಣ ಕಾಮಾಲೆ ರೋಗ ಬರದಂತೆ ತಡೆಯುತ್ತದೆ.
- ಕಬ್ಬಿನ ಹಾಲನ್ನು ಕುಡಿಯುವುದಕ್ಕಿಂತ ಕಬ್ಬಿನ ಜಲ್ಲೆಯನ್ನು ಜಗಿದು ರಸ ಹೀರುವ ಮೂಲಕ ಹಲ್ಲು ಮತ್ತು ಒಸಡುಗಳು ಗಟ್ಟಿಗೊಳ್ಳುತ್ತವೆ. ಇದರಲ್ಲಿರುವ ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲುಗಳನ್ನು ದೃಢಗೊಳಿಸಲು ನೆರವಾಗುತ್ತದೆ.
- ಕಿಡ್ನಿಯಲ್ಲಿ ಕಲ್ಲು ಬೆಳೆಯುವ ಸಮಸ್ಯೆ ಇರುವವರು ಕಬ್ಬಿನ ಹಾಲನ್ನು ನಿತ್ಯ ಸೇವಿಸಬೇಕು. ಇದನ್ನು ಸೇವಿಸಿದರೆ ಕಿಡ್ನಿಯಲ್ಲಿ ಕಲ್ಲು ಬೆಳೆಯುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
- ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಕಬ್ಬಿನ ಹಾಲಿನ ಸೇವನೆಯಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಥವಾ ಎಲ್ಡಿಎಲ್ ಪ್ರಮಾಣ ಕಡಿಮೆಯಾಗುತ್ತದೆ. ಹೃದಯ ಆರೋಗ್ಯ ಚೆನ್ನಾಗಿರುತ್ತದೆ.
- ಬಾಯಿಯ ದುರ್ವಾಸನೆ ಹೋಗಲಾಡಿಸಲು ಕಬ್ಬಿನ ಹಾಲು ಬಹಳ ಉಪಯೋಗಿ. ನಿಮಗೆ ಬಾಯಿ ದುರ್ವಾಸನೆಯ ಸಮಸ್ಯೆ ಇದ್ದರೆ ಇಂದಿನಿಂದಲೇ ಕಬ್ಬಿನ ಹಾಲನ್ನು ಸೇವಿಸಿ. ಇದರಲ್ಲಿರುವ ಖನಿಜಗಳು ನಿಮ್ಮ ಒಸಡನ್ನು ಬಲ ಪಡಿಸುತ್ತದೆ.