Wednesday, August 17, 2022

Latest Posts

ರೋಚಕತೆಯಿಂದ ಸಾಗುತ್ತಿದೆ ಬಿಹಾರ ಚುನಾವಣಾ ಫಲಿತಾಂಶ: ಅಧಿಕಾರದ ಗದ್ದುಗೆಗಾಗಿ ತೀವ್ರ ಪೈಪೋಟಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್ :

ಬಿಹಾರ ವಿಧಾನ ಸಭಾ ಚುನಾವಣೆಯ ಫಲಿತಾಂಶ ರೋಚಕತೆಯಿಂದ ಸಾಗುತ್ತಿದ್ದು, ಆಡಳಿತಾರೂಢ ಎನ್​ಡಿಎ ಮತ್ತು ಮಹಾಘಟಬಂಧನ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಸದ್ಯದ ಮಾಹಿತಿ ಪ್ರಕಾರ, ಈಗಾಗಲೇ 243 ಕ್ಷೇತ್ರಗಳ ಪೈಕಿ 150 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು, 93 ಕ್ಷೇತ್ರಗಳ ಮತ ಎಣಿಕೆ ಪ್ರಗತಿಯಲ್ಲಿದೆ.
150 ಕ್ಷೇತ್ರಗಳ ಪೈಕಿ ಬಿಜೆಪಿ 44, ಜೆಡಿಯು 27, ಹಿಂದುಸ್ಥಾನಿ ಅವಾಂ ಮೋರ್ಚಾ 3, ವಿಕಾಸ ಶೀಲ್ ಇನ್​ಸಾನ್ ಪಾರ್ಟಿ 4 ಸ್ಥಾನಗಳನ್ನು ಗೆದ್ದುಕೊಂಡಿವೆ. ಇದರೊಂದಿಗೆ ಎನ್​ಡಿಎ ಮೈತ್ರಿಕೂಟ 75 ಸ್ಥಾನಗಳಲ್ಲಿ ಗೆಲುವು ಕಂಡಿದೆ. ಮತ ಎಣಿಕೆ ಪ್ರಗತಿಯಲ್ಲಿರುವ 93 ಕ್ಷೇತ್ರಗಳ ಪೈಕಿ ಬಿಜೆಪಿ 28, ಜೆಡಿಯು 16, ಹಿಂದುಸ್ಥಾನಿ ಅವಾಂ ಮೋರ್ಚಾ 1 ರಲ್ಲಿ ಮುನ್ನಡೆಯಲ್ಲಿವೆ.
ಇನ್ನೊಂದೆಡೆ, ಆರ್​ಜೆಡಿ 47, ಕಾಂಗ್ರೆಸ್ 8 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ. ಮತ ಎಣಿಕೆ ಪ್ರಗತಿಯಲ್ಲಿರುವ ಕ್ಷೇತ್ರಗಳಲ್ಲಿ ಆರ್​ಜೆಡಿ 30, ಕಾಂಗ್ರೆಸ್ 11ರಲ್ಲಿ ಮುನ್ನಡೆಯಲ್ಲಿವೆ. ಉಳಿದ ಕಡೆಗಳಲ್ಲಿ ಎಡರಂಗವೂ ಕೆಲವು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದು, ಕೆಲವದರಲ್ಲಿ ಮುನ್ನಡೆ ಸಾಧಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!