Wednesday, August 17, 2022

Latest Posts

ರೋಟರಿ ಸಿಲ್ಕ್ ಸಿಟಿ ರಾಮನಗರ: ವಿವಿಧ ಕ್ಷೇತ್ರದ ಗಣ್ಯರಿಗೆ ಸನ್ಮಾನ

ರಾಮನಗರ: ಬೆಂಗಳೂರು ರೋಟರಿಗಳಿಗಿಂತ ಉತ್ತಮ ರೀತಿಯಲ್ಲಿ ರೋಟರಿ ಸಿಲ್ಕ್ ಸಿಟಿ ರಾಮನಗರ ನಿರ್ವಹಿಸುತ್ತಿರುವುದು ನನಗೆ ಸಂತೋಷ ತಂದಿದೆ’ ಎಂದು ರೋಟರಿ ಜಿಲ್ಲಾ ಸಹಪಾಲಕರಾದ ಬಿ.ಶಿವಪ್ಪ ತಿಳಿಸಿದರು.

ಮಂಗಳವಾರ ನಗರದ ಅರ್ಕಾವತಿ ಬಡಾವಣೆಯಲ್ಲಿರುವ ಗುರುಶ್ರೀ ಮ್ಯಾನ್‌ಷನ್ ನಲ್ಲಿ ರೋಟರಿ ಸಿಲ್ಕ್ ಸಿಟಿ ರಾಮನಗರ ಸಂಸ್ಥೆಯ ವತಿಯಿಂದ ಏರ್ಪಡಿಸಿದ್ದ ವೈದ್ಯರು, ಶಿಕ್ಷಕರು, ಅಭಿಯಂತರರ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಾಂಶುಪಾಲರಾದ ದಯಾನಂದ್, ವೈದ್ಯರಾದ ಡಾ. ಯಶೋಧ, ಸಹಾಯಕ ಪ್ರಾಧ್ಯಾಪಕಿ ಕವಿತಾ ವಿ, ಜಿಲ್ಲಾ ಶಿಕ್ಷಣಾಧಿಕಾರಿ ಗಂಗಾಧರ್ ಬಿ.ಎಸ್, ಲ್ಯಾಬ್ ಟೆಕ್ನಿಷಿಯನ್ ಪುಟ್ಟರಾಜು ಗಣ್ಯರನ್ನು ಹಾಗೂ ಎಸ್. ಎಸ್.ಎಲ್. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಗಳಾದ ಅರ್ಚನ ಬಿ.ಎಸ್, ನಿಸರ್ಗ ಜೆ.ವಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಚೈತನ್ಯ .ಸಿ, ಹುಸೇನ್ ಪಾಷಾ, ರಕ್ಷಿತಾ ಜೆ.ಆರ್. ಇವರುಗಳಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಆರಂಭದಲ್ಲಿ ರೋ|| ಕೆ.ವಿ.ಉಮೇಶ್ ಪ್ರಾರ್ಥನೆ ಮಾಡಿದರು. ಅಧ್ಯಕ್ಷರಾದ ಆರ್.ಎನ್. ರವಿಕುಮಾರ್ ಗಣ್ಯರನ್ನು ಸ್ವಾಗತಿಸಿದರು. ಕಾರ್ಯದರ್ಶಿ ರಘುಕುಮಾರ್.ಆರ್. ಅವರು ವರದಿ ಓದಿದರು. ನಿರೂಪಣೆಯನ್ನು ರೋ|| ನವೀನ್‌ಕುಮಾರ್ ಜೆ. ಮಾಡಿದರು. ಸಮಾರಂಭದಲ್ಲಿ ರೋ|| ಗೋಪಾಲ್ ವಿ, ರೋ|| ಎಲ್.ಪ್ರಭಾಕರ್, ರೋ|| ಲತಾಗೋಪಾಲ್, ರೋ|| ಸುರೇಶ್ ಎ.ಜೆ, ರೋ|| ಶಿವರಾಜು ಹಾಗೂ ರೋಟರಿ ಸಿಲ್ಕ್ ಸಿಟಿ ರಾಮನಗರದ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!