Sunday, August 14, 2022

Latest Posts

ರೌಡಿ ಶೀಟರ್‌ನಿಂದ ಆಟೋ ಚಾಲಕನ ಕೊಲೆ

ಮೈಸೂರು: ಕ್ಷುಲ್ಲಕ ಕಾರಣಕ್ಕೆ ರೌಡಿಶೀಟರ್ ತನ್ನ ತಂಡದೊಂದಿಗೆ ಆಟೋ ಚಾಲಕನನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಮೈಸೂರಿನ ಬಿಎಂಶ್ರೀ ನಗರದಲ್ಲಿ ನಡೆದಿದೆ.

ಆಟೋ ಚಾಲಕ ಸೋಮಶೇಖರ್(೩೬)ಕೊಲೆಯಾದವ. ಈತ ತನ್ನ ತೋಟದ ಮನೆ ಹತ್ತಿರ ಬುಧವಾರ ರಾತ್ರಿಯಲ್ಲಿ ತೆರಳುತ್ತಿದ್ದಾಗ ರೌಡಿಶೀಟರ್ ಸತ್ಯ ಮತ್ತವನ ಸ್ನೇಹಿತರು ಸೋಮಶೇಖರ್ ಮುಖಕ್ಕೆ ಮೊಬೈಲ್ ನಿಂದ ಟಾರ್ಚ್ ಬೆಳಕು ಹರಿಸಿದ್ದು, ಬಳಿಕ ಚಾಕುವಿನಿಂದ ಇರಿದಿದ್ದಾರೆ.

ಗಾಯಗೊಂಡ ಸೋಮಶೇಖರ್ ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಘಟನೆಯ ಬಳಿಕ ರೌಡಿಶೀಟರ್ ಸತ್ಯ ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಮೇಟಗಳ್ಳಿ ಠಾಣೆಯ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss