Tuesday, June 28, 2022

Latest Posts

ರೌಡಿ ಶೀಟರ್ ನಿಂದ ಪಿಎಸ್ಐ ಗೆ ಚಾಕು ಇರಿತ: ಪೊಲೀಸರಿಂದ ಫೈರಿಂಗ್

ಹಾಸನ: ರೌಡಿ ಶೀಟರ್ ಓವ೯ನನ್ನು ಬಂಧಿಸುವ ವೇಳೆ ಪಿಎಸ್ಐ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದು,ಪೊಲೀಸರು ಆರೋಪಿಯ ಮೇಲೆ ಫೈರಿಂಗ್ ಮಾಡಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಘಟನೆ: ಪೊಲೀಸರಿಂದ ಗುಂಡೇಟು ತಿಂದವ ಅರೆಕಲ್ಲು ಹೊಸಹಳ್ಳಿಯ ಸುನೀಲ್ (32). ಈತ ಮಾರಣಾಂತಿಕ ಹಲ್ಲೆ ಸೇರಿ 7 ಪ್ರಕರಣಗಳ ಆರೋಪಿಯಾಗಿದ್ದು, ಸುನೀಲ್ ಮತ್ತು ಆತನ ಸಹಚರರಾದ ಅರೆಕಲ್ಲು ಹೊಸಹಳ್ಳಿ ಸಂತೋಷ್, ದೊಡ್ಡ ಮಂಡಿಗನಹಳ್ಳಿ ಪ್ರತಾಪ್, ಸೂರಿ, ರವಿ, ಸಂತೋಷ್ ಹಾಗೂ ಆಲೂರು ತಾಲೂಕಿನ ಸತೀಶ್ ಅ. 23ರಂದು ಮೂರು ಮಂದಿ ಮೇಲೆ ದಾಳಿ ಮಾಡಿ, ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು.

ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಬಸವರಾಜ್, ಖಚಿತ ಮಾಹಿತಿಯ ಮೇರೆಗೆ ಸುನೀಲ್ ಸೇರಿದಂತೆ ಆರು ಮಂದಿ ಹಾಸನ ಹೊರವಲಯದ ಕೃಷ್ಣ ನಗರದ ಬಳಿ ಇರುವುದನ್ನು ದೃಢಪಡಿಸಿಕೊಂಡು, ಅವರನ್ನು ಬಂಧಿಸಲು ತೆರಳಿದ್ದರು.

ಪಿಎಸ್​ಐ ಬಸವರಾಜ್ ಮದ್ಯಪಾನ ಮಾಡುತ್ತಾ ಕುಳಿತಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲು ಮುಂದಾದಾಗ ಮೂವರು ಆರೋಪಿಗಳು ಪರಾರಿಯಾಗಿದ್ದು, ಇಬ್ಬರನ್ನು ವಶಕ್ಕೆ ಪಡೆದರು. ಆದರೆ ಪ್ರಮುಖ ಆರೋಪಿ ಸುನೀಲ್ ತಪ್ಪಿಸಿಕೊಳ್ಳಲು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ಬಸವರಾಜ್ ಅವರ ಹೊಟ್ಟೆ ಮತ್ತು ಎಡಗೈಗೆ ಗಂಭೀರ ಗಾಯವಾಗಿದೆ.

ತಕ್ಷಣ ಅವರ ರಕ್ಷಣೆಗಾಗಿ ಸ್ಥಳದಲ್ಲಿದ್ದ ಗ್ರಾಮಾಂತರ ವೃತ್ತ ನಿರೀಕ್ಷಕ ಪಿ.ಸುರೇಶ್, ಆರೋಪಿ ಸುನೀಲ್ ಕಾಲಿಗೆ ಗುಂಡು ಹಾರಿಸಿದ್ದು, ಫೈರಿಂಗ್ನಲ್ಲಿ ಆರೋಪಿ ಸುನೀಲ್ ತೊಡೆಯ ಭಾಗಕ್ಕೆ ಗುಂಡು ತಾಕಿದೆ.
ಗಾಯಾಳುಗಳಿಗೆ ಹಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss