Friday, August 12, 2022

Latest Posts

ಲಂಚ ಸ್ವೀಕಾರ: ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸಿಬಿ ಬಲೆಗೆ

ಚಿತ್ರದುರ್ಗ:  ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಭೂತಪ್ಪ ಹಾಗೂ ಅಕೌಂಟ್ಸ್ ಕನ್ಸಲ್‌ಟೆಂಟ್ ಸರ್ಪರಾಜ್  ಕಚೇರಿಯಲ್ಲಿ ರೂ.೫೦೦೦ ಲಂಚ ಸ್ವೀಕರಿಸುತ್ತಿರುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕಾರ್ಯಾಲಯಕ್ಕೆ ಅವಶ್ಯವಿರುವ ಅಲ್ಯೂಮಿನಿಂ ಗ್ಲಾಸ್ ಪಾರ್ಟಿಶಿಯನ್ ಸಾಮಗ್ರಿಗಳನ್ನು ಪೂರೈಸಲು ಪಟ್ಟಣ ಪಂಚಾಯಿತಿಯಿಂದ ೯೯,೬೪೩ ರೂ.ಗಳಿಗೆ ವೈ.ಆರ್.ನಾಗೇದ್ರ ಇವರಿಗೆ ಕಾರ್ಯಾದೇಶ ನೀಡಿದ್ದು ಸಾಮಗ್ರಿಗಳನ್ನು ಸರಬರಾಜು ಮಾಡಿದ್ದು ಆ ಮೊತ್ತದಲ್ಲಿ ೬೦,೦೦೦ ರೂ ಗಳನ್ನು ಜಮಾಮಾಡಲಾಗಿತ್ತು. ಉಳಿದ ಬಾಕಿ ಮೊತ್ತ ೩೯,೬೪೩ ರೂ.ಗಳನ್ನು ಪಾವತಿಸಲು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸರ್ಫರಾಜ್ ಅವರು ಮೂಲಕ ೫೦೦೦ ರೂ.ಗಳನ್ನು ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅಂಗಡಿ ಮಾಲೀಕ ಆ.೨೭ ರಂದು ಎಸಿಬಿಗೆ ನೀಡಿದ ದೂರಿನ ಮೇರೆಗೆ ಡಿವೈಎಸ್‌ಪಿ ಪರಮೇಶ್ವರ್ ಹೆಚ್.ಎಸ್.ಇನ್ಸ್‌ಸ್ಪೆಕ್ಟರ್ ಪ್ರಹ್ಲಾದ್ ಆರ್. ಚನ್ನಗಿರಿ ಮತ್ತು ಚೈತನ್ಯ ಸಿ.ಜೆ. ಹಾಗೂ ಸಿಬ್ಬಂದಿಗಳು ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ವಶಪಡಿಸಿ ದಸ್ತಗಿರಿ ಮಾಡಲಾಗಿರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss