Wednesday, June 29, 2022

Latest Posts

ಲಂಡನ್ ನ ಆರೋಗ್ಯ ಸಚಿವೆ ನಾಡಿನ್ ಡೋರಿಸ್ ಗೂ ತಗುಲಿದೆ ಕೊರೋನಾ

ಲಂಡನ್: ಇಂಗ್ಲೆಂಡ್ ನ ಆರೋಗ್ಯ ಸಚಿವೆ ನಾಡಿನ್ ಡೋರಿಸ್ ಗೆ ಕೊರೋನಾ ಸೋಂಕು ತಗುಲಿದೆ. ಈ ವಿಚಾರವನ್ನು ನಾಡಿನ್ ಡೋರಿಸ್ ಅವರೇ ತಿಳಿಸಿದ್ದಾರೆ. ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಸಚಿವರಿಗೆ ಸೋಂಕಿಗೆ ಒಳಪಟ್ಟಿದ್ದಾರೆಯೇ ಎಂಬ ಕಳವಳವನ್ನು ಸಚಿವೆ ವ್ಯಕ್ತಪಡಿಸಿದ್ದಾರೆ.

ನನಗೆ ಕೊರೊನಾ ಸೋಂಕು ತಗುಲಿರುವುದು ಧೃಢಪಟ್ಟಿದೆ. ಹಾಗಾಗಿ ಮನೆಯಲ್ಲಿಯೇ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದೇನೆ. ಮುನ್ನೇಚ್ಚರಿಕೆಗಾಗಿ ಈ ವಿಚಾರವನನ್ನು ಬಹಿರಂಗಪಡಿಸಿದ್ದೇನೆ. ನನಗೆ ಹೇಗೆ ಸೋಂಕು ತಗುಲಿರಬಹುದೆಂದು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ ಎಂದು ಡೋರಿಸ್ ಹೇಳಿದ್ದಾರೆ.

ಸೋಂಕಿಗೆ ಒಳಪಡುವುದಕ್ಕೂ ಮುಂಚಿತವಾಗಿ ಸಚಿವೆ ಸದನದಲ್ಲಿ ನೂರಾರು ಜನರನ್ನು ಭೇಟಿಯಾಗಿ, ಪ್ರಧಾನಿ ಬೋರಿಸ್ ಜಾನ್ಸನ್ ರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು ಎಂದು ಮಾಧ್ಯಮಗಳ ವರದಿ ತಿಳಿಸಿದೆ
ಈಗಾಗಲೇ ಕೊರೋನಾ ಸೋಂಕಿಗೆ ಬ್ರಿಟನ್ ನಲ್ಲಿ 6 ಮಂದಿ ಮೃತಪಟ್ಟಿದ್ದು, 370ಕ್ಕೂ ಹೆಚ್ಚು ಜನರಲ್ಲಿ ಸೋಂಕು ಖಿತವಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss