Thursday, July 7, 2022

Latest Posts

ಲಕ್ನೋ ನ್ಯಾಯಲಯದಲ್ಲಿ ಬಾಂಬ್ ಸ್ಫೋಟ; 3 ಸಜೀವ ಬಾಂಬ್ ಪತ್ತೆ

ಲಕ್ನೋ: ಇಲ್ಲಿನ ವಜೀರ್ ಗಂಜ್ ನ್ಯಾಯಾಲಯದಲ್ಲಿ ಕಚ್ಚಾ ಬಾಂಬ್ ಸ್ಪೋಟವಾಗಿದ್ದು, ಹಲವರಿಗೆ ಗಾಯಗಳಾಗಿವೆ. ಇದಾಗಲೇ ವಜೀರ್ ಗಂಜ್ ಪೊಲೀಸರಿಗೆ 3 ಸಜೀವ ಬಾಂಬ್ ಪತ್ತೆಯಾಗಿದೆ.

ನ್ಯಾಯಾಲಯದ ಆವರಣದಲ್ಲಿ ಎರಡು ಗುಂಪಿನ ನಡುವಿನ ಗಲಾಟೆಯೇ ಈ ಸ್ಪೋಟಕ್ಕೆ ಕಾರಣ ಎಂದು ಸ್ಥಳಿಯರು ಅಭಿಪ್ರಾಯಪಟ್ಟರು. ಈ ಸ್ಪೋಟದಲ್ಲಿ ಇಬ್ಬರು ವಕೀಲರು ಗಾಯಗೊಂಡಿದ್ದು, ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಲಕ್ನೋ ವಕೀಲರ ಸಂಘದ ಹಿರಿಯ ಸದಸ್ಯರನ್ನು ಗುರಿಯಾಗಿಸಿ ದುಷ್ಕರ್ಮಿಗಳು ಈ ಕೃತ್ಯ ವೆಸಗಿದ್ದಾರೆ ಎಂದು ಮೂಲಗಳು ಹೇಳಿವೆ.

ಬಾಂಬ್ ಸ್ಪೋಟದಲ್ಲಿ ಜಿತು ಯಾದವ್ ಕೈವಾಡವಿದೆ ಎಂದು ಲಖನೌ ವಕೀಲರ ಜಂಟಿ ಕಾರ್ಯದರ್ಶಿ ಸಂಜೀವ್ ಲೋಧಿ ಆರೋಪಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss