Wednesday, July 6, 2022

Latest Posts

ಲಕ್ಷಾಂತರ ರೂ. ಮೌಲ್ಯದ ಗಾಂಜಾ ಮಾರಾಟಕ್ಕೆ ಯತ್ನ: ಮೂವರ ಬಂಧನ

ಹೊಸ ದಿಗಂತ ವರದಿ, ಉಡುಪಿ:

ನಗರದ ಹೊರ ವಲಯದ ಶೀಂಬ್ರಾ ಸೇತುವೆ ಬಳಿ ಆಟೋ ರಿಕ್ಷಾದಲ್ಲಿ‌ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಎಂಟು ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಮಹಾರಾಷ್ಟ್ರ ಮೂಲದ ಗೌತಮ್‌ ರಾಜು ಶಿಮುಂಗೆ, ಪಂಜಾಬ್ ಮೂಲದ ಜೆಸ್ವಿಂದರ್ ಸಿಂಗ್ ಹಾಗೂ ಬ್ರಹ್ಮಾವರ ಕೊಳಲಗಿರಿಯ ಕೃಷ್ಣ ಜಲಗಾರ್ ಬಂಧಿತ ಆರೋಪಿಗಳಾಗಿದ್ದಾರೆ.

ಮಹಾರಾಷ್ಟ್ರದಿಂದ ಮಣಿಪಾಲದಲ್ಲಿ ಗಾಂಜಾ ಮಾರಾಟ ಮಾಡಲು ರಿಕ್ಷಾದಲ್ಲಿ ತರುತ್ತಿರುವ ಕುರಿತ ಖಚಿತ ಮಾಹಿತಿ ಪಡೆದ ಪೊಲೀಸರು ಈ ದಾಳಿ ಮಾಡಿದ್ದಾರೆ. ಆರೋಪಿಗಳಿಂದ 2.66ಲಲಕ್ಷ ರೂ. ಮೌಲ್ಯದ 8 ಕೆ.ಜಿ ಗಾಂಜಾ, ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ ಹಾಗೂ ಡಿವೈಎಸ್ಪಿ ಸುಧಾಕರ ನಾಯಕ್‌ ನೇತೃತ್ವದಲ್ಲಿ, ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ್ ಎಂ. ಗೌಡ, ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಣಿ ಹಾಗೂ ಮಣಿಪಾಲ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರೊಬೇಷನರಿ ಎಸ್ಸೈ ದೇವರಾಜ್ ಸಿದ್ದಣ್ಣ ಬಿರಾದಾರ್ ಮತ್ತು ಅಮೀನ್‌ಸಾಬ್‌ ಮೌಲಾಸಾಬ್ ಅತ್ತಾರ್, ಎ.ಎಸ್.ಐ ಶೈಲೇಶ್, ಎಚ್.ಸಿ. ದಯಾಕರ್ ಪ್ರಸಾದ್, ವಿಶ್ವಜಿತ್ , ನವೀನ್, ಅಬ್ದುಲ್ ರಝಾಕ್ ಪಿ.ಸಿ. ಸಂತೋಷ್ ಎಚ್.ಟಿ, ರೇವಣಸಿದ್ದಪ್ಪ, ಲೊಕೇಶ್ ಮತ್ತು ಆದರ್ಶ , ಬೈಂದೂರು ವೃತ್ತದ ಸಿಬ್ಬಂದಿ ಚಂದ್ರ, ಅಶೋಕ, ನವೀನ್ ಮತ್ತು ಗುರು ಪ್ರಸಾದ್ ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

ಕಾರ್ಯಾಚರಣೆ ನಡೆಸಿರುವ ತಂಡವನ್ನು ಪಶ್ಚಿಮ ವಲಯ ಐ.ಜಿ.ಪಿ. ದೇವಜ್ಯೋತಿ ರೇ ಶ್ಲಾಘಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss