Sunday, June 26, 2022

Latest Posts

ಲಡಾಕ್ ಪ್ರದೇಶದಲ್ಲಿ ಹೊಸ ಗಡಿ ಕ್ಯಾತೆ ತೆಗೆದ ಚೀನಾ: ಭಾರತದ 60 ಚದರ ಕಿ.ಮೀ ಪ್ರದೇಶ ಆಕ್ರಮಣ

ನವದೆಹಲಿ: ಭಾರತಕ್ಕೆ ಸೇರಿದ ಬರೋಬ್ಬರಿ 60 ಕಿ.ಮೀ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದ್ದು, ಲಡಾಕ್ ಪ್ರದೇಶದಲ್ಲಿ ಹೊಸ ಗಡಿ ಕ್ಯಾತೆ ತೆಗೆದಿದೆ.
ಗಾಲ್ವಾನ್ ನದಿ ಮತ್ತು ಪಾಂಗೊಂಗ್ ಸರೋವರದ ಕಣಿವೆ ಪ್ರದೇಶದಲ್ಲಿ ಚೀನಾದ ಸೈನಿಕರು ಆಯಕಟ್ಟಿನ ಡಿಎಸ್ ಡಿಬಿಓ ಹೆದ್ದಾರಿಯನ್ನು ಗುರಿಯಾಗಿರಿಸಿಕೊಂಡಿದ್ದು ಸಬ್-ಸೆಕ್ಟರ್ ನಾರ್ತ್ ಜೊತೆಗಿನ ಸೇನಾ ಸಂಪರ್ಕವನ್ನು ಕಡಿತಗೊಳಿಸಲು ಪ್ರಯತ್ನಿಸಿದ್ದಾರೆ.
ಈಗ ಡಿಎಸ್ ಡಿಬಿಓ ರಸ್ತೆಯಿಂದ ಕೇವಲ ಒಂದುವರೆ ಕಿ.ಮೀ ದೂರದಲ್ಲಿರುವ ಷ್ಯೋಕ್ ನದಿ ಬಳಿ ಚೀನಾ ಸೇನೆ ಜಮೆಯಾಗಿದ್ದು, ಹೊಸ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಗಡಿ ಆಕ್ರಮಣದಿಂದ ಚೀನಾದ ಪಿಎಲ್ಎ ಸೈನಿಕರು ಈ ರಸ್ತೆಯಲ್ಲಿ ಶಾಶ್ವತವಾಗಿ ಪ್ರಾಬಲ್ಯ ಸಾಧಿಸಲು ಮುಂದಾಗಿದ್ದಾರೆ ಎಂದು ವ್ಯಾಖ್ಯಾನಿಸಲಾಗಿದೆ.
ಭಾರತ ಚೀನಾ ಗಡಿ ವಿವಾದ ಸಂಬಂಧ ಎರಡೂ ದೇಶಗಳು ಒಪ್ಪಂದಗಳ ಮೂಲಕ ಬಗೆಹರಿಸಲು ಮುಂದಾಗಿರುವ ನಡುವೆಯೇ ಈ ಬೆಳವಣಿಗೆ ನಡೆದಿದ್ದು, ಭಾರತೀಯ ಸೇನಾ ಪಡೆ ದಶಕಗಳಿಂದ ನಿಯಮಿತವಾಗಿ ಭೇಟಿ ನೀಡುವ ಭಾರತೀಯ ‘ಪೆಟ್ರೋಲಿಂಗ್ ಪಾಯಿಂಟ್‌’ಗಳಿಗೆ ಚೀನಾದ ಪಡೆಗಳು ಪ್ರವೇಶವನ್ನು ನಿರ್ಬಂಧಿಸಿವೆ ಎಂದು ತಿಳಿದುಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss