Tuesday, June 28, 2022

Latest Posts

ಲಡಾಖ್‌ ಎಲ್‌ಎಸಿ ವಿವಾದ: ಮಿಲಿಟರಿ ಮಾತುಕತೆ ಸಫಲ, ಶಾಂತಿ ಸ್ಥಾಪನೆಗೆ ಚೀನಾ ಒಪ್ಪಿಗೆ

ಹೊಸದಿಲ್ಲಿ: ಲಡಾಖ್‌ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಉಂಟಾಗಿರುವ ಕುರಿತು ಭಾರತ ಎರಡು ದಿನದಿಂದ ನಡೆಸಿರುವ ಮಿಲಿಟರಿ ಮಾತುಕತೆ ಸಫಲವಾಗಿದ್ದು, ಶಾಂತಿ ಸ್ಥಾಪನೆಗೆ ಚೀನಾ ಒಪ್ಪಿಗೆ ಸೂಚಿಸಿದೆ.
ಭಾನುವಾರ ನಡೆದ ಸರಣಿ ಮಾತುಕತೆಯಲ್ಲಿ ಉಭಯ ರಾಷ್ಟ್ರಗಳು ಗಡಿಯಲ್ಲಿ ಶಾಂತಿ ಕಾಪಾಡಲು ಒಪ್ಪಿಗೆ ಸೂಚಿಸಿದ್ದು, ಇದರಿಂದ ಹಲವು ದಿನಗಳಿಂದ ಉಂಟಾಗಿರುವ ಗಡಿ ಬಿಕ್ಕಟ್ಟು ತಹಬಂದಿಗೆ ಬರಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಭಾರತವು ಚೀನಾ ಜತೆ ರಾಜತಾಂತ್ರಿಕ ಹಾಗೂ ಮಿಲಿಟರಿ ಸಂವಹನ ನಡೆಸಿದ್ದು, ಹಲವು ಸುತ್ತಿನ ಮಾತುಕತೆ ಬಳಿಕ ಎರಡೂ ರಾಷ್ಟ್ರಗಳು ಗಡಿಯಲ್ಲಿ ಶಾಂತಿ ಕಾಪಾಡಲು ಒಪ್ಪಿವೆ ಎಂದು ಮಾಹಿತಿ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss