ಲಡಾಖ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಿರಿಯ ಅಧಿಕಾರಿಗಳು ಹಾಗೂ ಸೈನಿಕರನ್ನು ಭೇಟಿ ಮಾಡಲು ಇಂದು ಲಡಾಖ್ ಗೆ ಸರ್ಪ್ರೈಸ್ ವಿಸಿಟ್ ನೀಡಿದ್ದಾರೆ.
ಚೀನಾ ಗಡಿ ಸಂಘರ್ಷದ ನಡುವೆ ಇಂದು ಮುಂಜಾನೆ ಪ್ರಧಾನಮಂತ್ರಿ ನರೇಂದ್ರ ಮೋದಿ ನಿಮು ಪ್ರದೇಶಕ್ಕೆ ತಲುಪಿದ್ದು, ಸೇನೆ ಹಾಗೂ ಐಟಿಪಿಬಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಸಿಡಿಎಸ್ ಜೆನರಲ್ ಬಿಪಿನ್ ರಾವತ್ ಹಾಗು ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಣೆ ಅವರು ಇದ್ದಾರೆ.
ಭಾರತೀಯ ಸೇನೆಯ 14 ಪಡೆಗಳ ಉನ್ನತ ಮಿಲಿಟರಿ ಅಧಿಕಾರಿಗಳು ಕಾರ್ಯಾಚರಣೆಯ ಸನ್ನದ್ಧತೆಯ ಬಗ್ಗೆ ಮೋದಿಗೆ ವಿವರಿಸಲಿದ್ದಾರೆ. 14 ಕಾರ್ಪ್ಸ್ ಮುಖ್ಯಸ್ಥರಾಗಿರುವ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಅವರು ಚೀನಾ ಜನರ ವಿಮೋಚನಾ ಸೈನ್ಯದ ಮೇಜರ್ ಜನರಲ್ ಲಿಯು ಲಿನ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಪ್ರಧಾನಿ ಮೋದಿ ವಾಯುಪಡೆ ಮತ್ತು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿಯೊಂದಿಗೆ ಸಂವಹನ ನಡೆಸಿದರು ಎಂದು ಸುದ್ದಿ ವರದಿಗಳು ತಿಳಿಸಿವೆ. ನಿಮು ಜಾನಸ್ಕರ್ ಶ್ರೇಣಿಯ 11,000-12,000 ಅಡಿ ಎತ್ತರದಲ್ಲಿದೆ.
ದೇಶದ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುವವರಿಗೆ ಸಶಸ್ತ್ರ ಪಡೆಗಳು ಸೂಕ್ತ ಉತ್ತರ ನೀಡಿದೆ ಎಂದು ಮೋದಿ ಭಾನುವಾರ ಹೇಳಿದ ನಂತರ ಭಾರತ ತನ್ನ ಗಡಿ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವ ಹಕ್ಕಿದೆ ಎಂದು ಪುನರುಚ್ಚರಿಸಿದ್ದಾರೆ. ಈ ಹಿಂದೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಲೇಹ್ಗೆ ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದರು ಆದರೆ ಆ ಭೇಟಿ ಮುಂದೂಡಲಾಲಾಗಿದೆ.