Friday, August 19, 2022

Latest Posts

ಲಯನ್ಸ್ ಕ್ಲಬ್ ವತಿಯಿಂದ ಶಾಲೆಯಲ್ಲಿ ಶ್ರಮದಾನ: ಥರ್ಮಲ್ ಸ್ಕ್ರೀನಿಂಗ್ ಮಾಪಕ ಕೊಡುಗೆ

ಹೊಸದಿಗಂತ ವರದಿ ಮಡಿಕೇರಿ:

ಕೋವಿಡ್ – 19 ಸಾಂಕ್ರಮಿಕದ ಹಿನ್ನೆಲೆಯಲ್ಲಿ ಸುಮಾರು 9 ತಿಂಗಳುಗಳಿಂದ ಮುಚ್ಚಲ್ಪಟ್ಟಿದ್ದ ಸರ್ಕಾರಿ ಶಾಲೆಗಳು ಪುನರಾರಂಭಗೊಂಡಿದ್ದು, ಸುಂಟಿಕೊಪ್ಪದ ಲಯನ್ಸ್ ಕ್ಲಬ್ ವತಿಯಿಂದ ಸಮೀಪದ ಕಾನ್ ಬೈಲ್ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿನ ಕಾಡು ಕಡಿದು ಕಸ ತೆಗೆದು ಸ್ವಚ್ಛಗೊಳಿಸಲಾಯಿತು.
ಅಲ್ಲದ ಶಾಲೆಯ ಧ್ವಜ ಸ್ತಂಭದ ತಳಭಾಗ ಹಾಗೂ ಶಾಲೆಯ ಗೇಟಿಗೆ ಸಂಸ್ಥೆಯ ವತಿಯಿಂದ ಬಣ್ಣ ಬಳಿಯಲಾಯಿತು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಗ್ಲೆನ್ ಮೆನೇಜಸ್, ಕಾರ್ಯದರ್ಶಿ ಶಶಾಂಕ್ ಎಸ್.ಎಸ್. ಖಜಾಂಚಿ ನಿಕೇಶ್ ಮತ್ತು ಸದಸ್ಯರಾದ ಎಂ.ಕೆ. ಉತ್ತಯ್ಯ, ಶಶಿಕಾಂತ್, ಸತೀಶ್, ಗಣೇಶ್ ಮತ್ತು ಶ್ರೀನಿವಾಸ್ ಪಾಲ್ಗೊಂಡಿದ್ದರು.
ಇದೇ ಸಂದರ್ಭ ಸಂಸ್ಥೆಯ ವತಿಯಿಂದ ಶಾಲೆಗೆ ಒಂದು ಥರ್ಮಲ್ ಸ್ಕ್ರೀನಿಂಗ್ ಮಾಪಕವನ್ನು ಶಾಲೆಯ ಮುಖ್ಯೋಪಾಧ್ಯಾಯ ಎಂ.ಎಸ್. ಚನ್ನಪ್ಪ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಶಾಲೆಯ ಶಿಕ್ಷಕರಾದ ಅಬ್ಬಾಸ್, ಚಂದ್ರಾವತಿ ಡಿ.ಎಂ., ಶಾಂತಿ ಮತ್ತು ವಾಣಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!