Wednesday, June 29, 2022

Latest Posts

ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ರಚನೆಗೆ ಪ್ರಸ್ತಾವನೆ ಸಲ್ಲಿಸಿದ ಯೋಗಿ ಸರಕಾರ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಲವ್ ಜಿಹಾದ್ ಕುರಿತು ರಾಷ್ಟ್ರವ್ಯಾಪ್ತಿ ಪರ-ವಿರೋಧಗಳ ಚರ್ಚೆ ನಡೆಯುತ್ತಿದೆ.ಇದರ ನಡುವೆ ಯೋಗಿ ಸರಕಾರ ಕೂಡ ಕಠಿಣ ಕಾನೂನು ರಚೆನೆಗೆ ಚಿಂತನೆ ನಡೆಸುತ್ತಿದೆ.
ಹೌದು, ಉತ್ತರ ಪ್ರದೇಶ ಸರ್ಕಾರವು ಗೃಹ ಇಲಾಖೆಯು ಅಲ್ಲಿನ ಕಾನೂನು ಇಲಾಖೆಗೆ ‘ಲವ್ ಜಿಹಾದ್ ‘ ವಿರುದ್ಧ ಕಠಿಣ ಕಾನೂನು ರಚನೆ ಕುರಿತು ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ಜಾರಿಗೆ ತರುವಂತೆ ಯೋಜನೆಗಳನ್ನು ರೂಪಿಸುತ್ತಿದೆ.
ಈಗಾಗಲೇ ಮಧ್ಯಪ್ರದೇಶದ ಸರ್ಕಾರವು ಲವ್ ಜಿಹಾದ್ ಪ್ರಕರಣಗಳ ಕಡಿವಾಣಕ್ಕೆ ಕಾಯ್ದೆ ರೂಪಿಸಲು ತೀರ್ಮಾನಿಸಿದ್ದು, ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 15 ದಿನದಲ್ಲೇ ಲವ್ ಜಿಹಾದ್ ತಡೆಗೆ ಕಠಿಣ ಕಾನೂನು ಜಾರಿಗೆ ತರುವ ಸುಳಿವು ನೀಡಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರು, ವಿವಾಹದ ಕಾರಣಕ್ಕಾಗಿ ನಡೆಯುವ ಧಾರ್ಮಿಕ ಮತಾಂತರ ನಿಷೇಧಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸುವುದಾಗಿ ಮಂಗಳವಾರ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss