Friday, July 1, 2022

Latest Posts

‘ಲವ್ ಜಿಹಾದ್’ ಸುಗ್ರೀವಾಜ್ಞೆ ತಡೆಗೆ ಹೈಕೋರ್ಟ್ ನಿರಾಕರಣೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

‘ಲವ್ ಜಿಹಾದ್’ ಹೆಸರಿನಲ್ಲಿ ಮತಾಂತರವನ್ನು ನಿಷೇಧಿಸಲು ಉತ್ತರಪ್ರದೇಶ ಸರ್ಕಾರ ನವೆಂಬರ್ 24ರಂದು ‘ವಿಧಿ ವಿರುಧ್ ಧರ್ಮಾಂತರನ್-2020’ ಎಂಬ ಹೆಸರಿನಲ್ಲಿ ತಂದ ಸುಗ್ರೀವಾಜ್ಞೆಯನ್ನು ತಡೆಹಿಡಿಯಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ.
ಈ ಸುಗ್ರೀವಾಜ್ಞೆ ವಿರುದ್ಧ ತಡೆಯಾಜ್ಞೆ ನೀಡಲು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (ಪಿಎಲ್​ಎ) ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಮತ್ತು ನ್ಯಾ. ಪಿಯೂಷ್ ಅಗ್ರವಾಲ್ ಅವರನ್ನೊಳಗೊಂಡ ನ್ಯಾಯಪೀಠವು, ಸುಗ್ರೀವಾಜ್ಞೆಯನ್ನು ತಡೆಹಿಡಿಯಲು ಹಾಗೂ ತಡೆಯಾಜ್ಞೆಯ ರೂಪದಲ್ಲಿ ಯಾವುದೇ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದೆ.
ಅಲ್ಲದೇ ‘ಮತಾಂತರ ನಿಷೇಧ – 2020’ ಕಾನೂನನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದವರಿಗೆ ಹೈಕೋರ್ಟ್ ನೋಟಿಸ್ ನೀಡಿದ್ದು, ಜನವರಿ 4ರೊಳಗೆ ಪಿಐಎಲ್‌ಗಳ ವಿರುದ್ಧ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಜನವರಿ 7ಕ್ಕೆ ನಿಗದಿಪಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss