ಮುಂಬೈ : ಸುಮಾರು ಎರಡು ವರ್ಷಗಳಿಂದ ಬಾಲಿವುಡ್ ನಟ ಶಾರುಖ್ ಖಾನ್.ನಟನೆಯ ಯಾವುದೇ ಸಿನಿಮಾ ಬಂದಿಲ್ಲ. ಬಾದ್ ಶಾ ಶಾರುಖ್ ಖಾನ್.ಏನು ಮಾಡ್ತಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತು. ಇದೀಗ, ಶಾರುಖ್ ಖಾನ್.ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಆದರೆ, ಈ ಚಿತ್ರದಲ್ಲಿ ಶಾರುಖ್ ನಟಿಸುತ್ತಿಲ್ಲ, ನಿರ್ಮಿಸುತ್ತಿದ್ದಾರೆ.
ಹೌದು, ರೆಡ್ ಚಿಲ್ಲಿಸ್ ಎಂಟರ್ಟೈಮೆಂಟ್ ಅಡಿಯಲ್ಲಿ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಈ ಚಿತ್ರಕ್ಕೆ ಲವ್ ಹಾಸ್ಟೇಲ್ ಎಂದು ಹೆಸರಿಡಲಾಗಿದೆ. ಇದೊಂದು ಕ್ರೈಂ ಥ್ರಿಲ್ಲರ್ ಕಥೆಯಾಗಿದ್ದು, ಶಂಕರ್ ರಾಮನ್ ನಿರ್ದೇಶನ ಮಾಡುತ್ತಿದ್ದಾರೆ. ಗೌರಿ ಖಾನ್, ಮನೀಶ್ ಮುಂದ್ರಾ, ಗೌರವ್ ವರ್ಮಾ ಜಂಟಿಯಾಗಿ ಬಂಡವಾಳ ಹಾಕುತ್ತಿದ್ದಾರೆ.
ಲವ್ ಹಾಸ್ಟೆಲ್’ ಚಿತ್ರದಲ್ಲಿ ಸಾನ್ಯ ಮಲ್ಹೋತ್ರ, ವಿಕ್ರಾಂತ್ ಮಸ್ಸಿ, ಹಾಗೂ ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ, 2021ರಲ್ಲಿ ಈ ಚಿತ್ರ ಸೆಟ್ಟೇರಲಿದೆ.