Friday, July 1, 2022

Latest Posts

ಲಸಿಕೆ ರಾಜತಾಂತ್ರಿಕತೆ: ಭಾರತಕ್ಕೆ ಅಮೆರಿಕ ಶ್ಲಾಘನೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತವು ತನ್ನ  ನೆರೆಕರೆಯ ಕೆಲವು ದೇಶಗಳಿಗೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ವಿತರಿಸಿರುವುದನ್ನು ಅಮೆರಿಕವು ಶ್ಲಾಘಿಸಿದೆ.

ಭಾರತವು ತನ್ನ ನೆರೆಯ ದೇಶಗಳಿಗೆ ನಿಜವಾದ ಅರ್ಥದಲ್ಲಿ ಸ್ನೇಹಿತನಂತೆ ವರ್ತಿಸಿದೆ. ಭಾರತದ ಕಾರ್ಯ ಸ್ತುತ್ಯಾರ್ಹ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಪ್ರಕಟಣೆ ತಿಳಿಸಿದೆ.

ಭಾರತದ ಔಷಧ ಉತ್ಪಾದನಾ ವ್ಯವಸ್ಥೆಯು ಜಗತ್ತಿಲ್ಲೆ ಉತ್ತಮವಾಗಿದೆ. ಇದನ್ನು ಭಾರತವು ಜಾಗತಿಕವಾಗಿ ನೆರವಾಗಲು ಬಳಸಿಕೊಂಡಿರುವುದು ಶ್ಲಾಘನೀಯ ಎಂದು ಅಮೆರಿಕ ಹೊಗಳಿದೆ. ಜಾಗತಿಕ ಆರೋಗ್ಯ ಕಾಪಾಡುವಲ್ಲಿ ಭಾರತದ ಈ ಕಾರ್ಯಕ್ಕೆ ನಾವು ಚಪ್ಪಾಳೆ ತಟ್ಟುತ್ತೇವೆ ಎಂದಿದೆ ಅಮೆರಿಕ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss