ಲಾಕ್‌ಡೌನ್‌ನಿಂದ ಬಡವರಿಗೆ ಸಂಕಷ್ಟ: 6 ದಿನಗಳ ಡ್ಯೂಟಿಗೆ ಇನ್ಫೀ ಮೂರ್ತಿ ಸಲಹೆ

0
126

ಬೆಂಗಳೂರು: ಐಟಿ ಸಂಸ್ಥೆಗಳ ನೌಕರವರ್ಗವಿನ್ನು ವಾರಕ್ಕೆ ಕನಿಷ್ಠ 60 ಗಂಟೆ ಕೆಲಸ ಮಾಡಿದರೆ ಮಾತ್ರ ಉತ್ಪಾದನೆಯ ಗುರಿ ತಲುಪಲು ಸಾಧ್ಯವಾಗುತ್ತೆ ಎಂದು ಇನ್‌ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹೇಳಿದ್ದಾರೆ.
ಆಂಗ್ಲ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿ, ಕೆಲಸದ ಅವಧಿಯನ್ನು ಹೆಚ್ಚಿಸಿಕೊಂಡು ಐಟಿ ಉದ್ಯೋಗಿಗಳು ಎಲ್ಲರೂ ದುಡಿದಾಗ ಮಾತ್ರ , ಕೊರೋನಾ ಎಸಗಿರುವ ಸವಾಲನ್ನು ಎದುರಿಸಲು ಸಾಧ್ಯವಾಗುತ್ತೆ ಎಂದಿದ್ದಾರೆ.
ನಿತ್ಯವೂ ಇಂದು ಹತ್ತು ತಾಸುಗಳ ಕಾಲ ಐಟಿ ಉದ್ಯೋಗಿ ಕೆಲಸ ಮಾಡುವುದು ರೂಢಿಯಾಗಬೇಕಿದೆ. ಮನೆಯಿಂದ ಕೆಲಸ ಮಾಡುವಂತಹವರಿಗೆ ಕಂಪನಿ ಉತ್ಪಾದನೆಯ ಗುಣಮಟ್ಟದ ಬಗ್ಗೆ ಸ್ಪಷ್ಟ ಪರಿಕಲ್ಪನೆ ಇರಬೇಕು. ಈ ಸಂಬಂಧ ಕಂಪನಿಗಳ ಆಡಳಿತವರ್ಗ ಒಂದಷ್ಟು ನಿಯಮಾವಳಿಗಳನ್ನು ರೂಪಿಸುವ ಅಗತ್ಯವಿದೆ, ಇಲ್ಲವಾದಲ್ಲಿ ವರ್ಕ್ ಫ್ರಂ ಹೋಂ ಪದ್ಧತಿ ಯಶಸ್ಸು ಕಾಣುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬಹಳ ದಿನಗಳ ಕಾಲ ಲಾಕ್‌ಡೌನ್ ವಿಸ್ತರಿಸಲು ಸಾಧ್ಯವಿಲ್ಲ. ಇದು ಒಟ್ಟಾರೆ ದೇಶದ ಆರ್ಥಿಕತೆ ಮೇಲೆ ಪ್ರತಿಕೂಲಕರ ಪರಿಣಾಮ ಬೀರುತ್ತೆ. ಸೂಕ್ತ ಮಾರ್ಗಸೂಚಿ ಮತ್ತು ಕಟ್ಟುಪಾಡುಗಳ ಜೊತೆ ಜನತೆ ಇಂದು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗುವುದು ಅನಿವಾರ್ಯ, ಇಲ್ಲವಾದಲ್ಲಿ ಕೂಲಿ, ಕಾರ್ಮಿಕರು ಮತ್ತು ಬಡವರು ಎಲ್ಲ ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕುವಂತಾಗುತ್ತೆ ಎಂದಿದ್ದಾರೆ.

LEAVE A REPLY

Please enter your comment!
Please enter your name here