Saturday, June 25, 2022

Latest Posts

ಲಾಕ್‌ಡೌನ್ ಅವಧಿ ಮುಗಿದ ಬಳಿಕ ತಂಬಾಕು ಬೋರ್ಡ್ ನಿಂದ ತಂಬಾಕನ್ನು ಖರೀದಿ: ಪ್ರತಾಪ್‌ಸಿಂಹ

ಮೈಸೂರು: ಕೊರೋನಾ ವೈರಸ್ ತಡೆಯಲು ಜಾರಿಗೆ ತಂದಿರುವ ಲಾಕ್‌ಡೌನ್ ಅವಧಿ ಮುಗಿದ ಬಳಿಕ ತಂಬಾಕು ಬೋರ್ಡ್ ನಿಂದ ತಂಬಾಕನ್ನು ಖರೀದಿ ಮಾಡಲಾಗುವುದು. ಹಾಗಾಗಿ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಸಂಸದ ಪ್ರತಾಪ್‌ಸಿಂಹ ತಿಳಿಸಿದರು.
ಶುಕ್ರವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಕೊರೋನಾ ವೈರಸ್ ತಡೆಯಲು ಜಾರಿಗೆ ತಂದಿರುವ ಲಾಕ್‌ಡೌನ್‌ನಿಂದಾಗಿ ಎರಡೂವರೆ ಮಿಲಿಯನ್‌ನಷ್ಟು ತಂಬಾಕು ಹಾಗೆಯೇ ಉಳಿದಿದೆ. ಮುಂದೆ ತಂಬಾಕು ಬೆಳೆಯಬೇಕೇ ಬೇಡವೇ ಎಂದು ರೈತರು ಕೇಳುತ್ತಿದ್ದಾರೆ. ತಂಬಾಕು ಮಂಡಳಿ ಇದನ್ನು ನಿರ್ವಹಣೆ ಮಾಡಲಿದೆ. ಲಾಕ್‌ಡೌನ್ ಮುಗಿದ ಬಳಿಕ, ಆ ತಂಬಾಕು ನಾವೇ ಕೊಂಡುಕೊಳ್ಳುತ್ತೇವೆ. ಬೋರ್ಡ್ ಮುಖಾಂತರ ನಾವು ತಂಬಾಕು ಖರೀದಿ ಮಾಡುತ್ತೇವೆ. ರೈತರು ಆತಂಕಪಡುವ ಅಗತ್ಯ ಇಲ್ಲ. ಇದೇ ಮೊದಲ ಬಾರಿಗೆ ೪ ವರ್ಷದಲ್ಲಿ ತಂಬಾಕು ಬೆಳೆ ಕಡಿಮೆ ಬೆಲೆಗೆ ಬಂದಿದೆ. ಆದರೆ ರೈತರು ಬೆಳೆದ ಬೆಲೆಗೆ ಸರಿಯಾದ ಬೆಲೆ ಸೃಷ್ಟಿಸುವ ಕೆಲಸ ಬೋರ್ಡ್ ಮಾಡಲಿದೆ ಎಂದರು.
ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡುವಿಕೆಗೆ ಕಾರಣವಾಗಿರುವ ನಂಜನಗೂಡಿನ ಜ್ಯುಬಿಲಿಯೆಂಟ್ ಔಷಧ ಕಾರ್ಖಾನೆ ವಿರುದ್ಧ ಪ್ರಕರಣ ದಾಖಲಿಸೋದು ಕಾನೂನಿನಡಿಯಲಿ ಕಷ್ಟಸಾಧ್ಯ. ಕೋರ್ಟ್ಗೆ ಹೋದರೂ ಏನಂತ ದೂರು ಕೊಡೋದು? ಸರ್ಕಾರ ಚೀನಾದಿಂದ ಸರಕು ತರಬೇಡಿ ಅಂತ ಹೇಳಿತಾ ? ಸರಕು ಬಂದಿರೋ ಬಗ್ಗೆ ಕೇಸ್ ದಾಖಲಿಸೋದಾದರೆ, ತಬ್ಲಿಘಿಗಳ ಮೇಲು ದೂರು ದಾಖಲಿಸಬೇಕಾಗುತ್ತೆ. ಅದೆಲ್ಲ ಆಗೋ ಮಾತಾ ನೀವೇ ಹೇಳಿ ಎಂದರು.
ಕಾರ್ಖಾನೆಗಿಂತ ಅಲ್ಲಿನ ಕಾರ್ಮಿಕರ ಹಿತ ಕಾಯಬೇಕಿದೆ. ಹಾಗೊಮ್ಮೆ ನಾವು ನೀವೂ ಎಲ್ಲ ಸೇರಿ ಕಂಪನಿ ಮುಚ್ಚಿಸೋಣ. ಆ ಬಳಿಕ ಸರ್ಕಾರ ಅಥವಾ ಖಾಸಗಿಯವರು ಆ ಕಾರ್ಮಿಕರಿಗೆ ಕೆಲಸ ಕೊಡ್ತಾರಾ.? ಆ ಕುಟುಂಬದ ಜೀವನ ನಡೆಸುತ್ತಾರಾ? ಆ ಕಾರ್ಮಿಕರು ಹಾಗೂ ಕಂಪನಿ ಮೇಲೆ ಅಂತಃಕರಣ ಇರಬೇಕಿದೆ. ಕಾರ್ಮಿಕರಿಗೆ ಸೋಂಕು ಬರಲಿ ಅಂತ ಕಂಟೈನರ್ ತರಿಸಿಲ್ಲ. ಗೊತ್ತಿಲ್ಲದ ಅಚಾತುರ್ಯ ನಡೆದು ಹೋಗಿದೆ. ಅದು ಹೇಗೆ ಆಗಿದೆ ಎಂಬ ಮೂಲ ಸದ್ಯ ಹುಡುಕುವ ಕೆಲಸ ಆಗಬೇಕಿದೆ. ಆ ಕೆಲಸ ಈಗಾಗಲೇ ನಡೆಯುತ್ತಿದ್ದು, ಶೀಘ್ರದಲ್ಲೇ ಗೊತ್ತಾಗಲಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss