ಲಾಕ್‌ಡೌನ್ ಉಲ್ಲಂಘಿಸಿದ ಯುವಕನ ‘ಹಣೆಬರಹ’ ಬರೆದ ಮಹಿಳಾ ಪೊಲೀಸ್ ಅಧಿಕಾರಿ!

0
105

ಭೂಪಾಲ್: ಕೊರೊನಾ ವೈರಸ್ ಹರಡುವಿಕೆಗೆ ಕಡಿವಾಣ ಹಾಕಬೇಕು ಎಂದು ದೇಶಕ್ಕೆ ದೇಶವೇ ಹೋರಾಡುತ್ತಿದ್ದರೆ, ಉದ್ದೇಶ ಪೂರ್ವಕವಾಗಿ ಲಾಕ್‌ಡೌನ್ ಉಲ್ಲಂಘಿಸುವವರಿಗೆ ‘ಮುಖಕ್ಕೆ ಮಂಗಳಾರತಿ’ ಎತ್ತಿ ಸಾಮಾಜಿಕ ಜಾಲತಾಣದಲ್ಲಿ ‘ವೈರಲ್’ ಆಗಿದ್ದಾರೆ ಇಲ್ಲಿ ಪೊಲೀಸರು!
ನಡೆದದ್ದೇನು?
ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ದೇಶದಲ್ಲಿ ೨೧ ದಿನ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಇದರ ನಡುವೆ ಕೆಲವರು ಬೇಕು ಬೇಕಂತಲೇ ನಿಯಮಗಳನ್ನು ಉಲ್ಲಂಘಿಸಿ ಬೀದಿಗೆ ಇಳಿಯುತ್ತಿದ್ದಾರೆ. ಹೀಗೆ ಮಧ್ಯಪ್ರದೇಶದ ಛತ್ತರ್ ಪುರ್ ನ ಗೋರಿಹಾರ್ ಪ್ರದೇಶದಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಕಾರ್ಮಿಕನ ಹಣೆ ಮೇಲೆ ‘ನಾನು ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸಿದ್ದೇನೆ, ನನ್ನಿಂದ ಅಂತರ ಕಾಯ್ದುಕೊಳ್ಳಿ’ ಎಂದು ಮಹಿಳಾ ಸಬ್ ಇನ್ಸ್ ಪೆಕ್ಟರ್ ಬರೆದಿದ್ದಾರೆ. ಈ ಚಿತ್ರವು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಎಸ್ಪಿ ಕುಮಾರ್ ಸೌರಭ್, ಇದೊಂದು ಅನಿರೀಕ್ಷಿತ ಕ್ರಮವಾಗಿದ್ದು ಕಾನೂನು ಪ್ರಕಾರ ಸಬ್ ಇನ್ಸ್ ಪೆಕ್ಟರ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here