Wednesday, July 6, 2022

Latest Posts

ಲಾಕ್‌ಡೌನ್ : ಗಾಜನೂರಿನ ಬಾರ್‌ನಲ್ಲಿ ಕಳ್ಳತನಕ್ಕೆ ಯತ್ನಿಸಿದ ಎಣ್ಣೆ ಪ್ರಿಯರು!

ಶಿವಮೊಗ್ಗ: ಲಾಕ್‌ಡೌನ್ ಹಿನ್ನಲೆ ಯಾವುದೇ ಮದ್ಯದ ಅಂಗಡಿಗಳು ತೆರೆಯುತ್ತಿಲ್ಲ. ಹೀಗಾಗಿ ಎಣ್ಣೆ ಪ್ರಿಯರು ಬಾರ್ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಗಾಜನೂರು ಗ್ರಾಮದಲ್ಲಿ ನಡೆದಿದೆ.
ಗಾಜನೂರಿನ ಸ್ನೇಹ ಬಾರ್‌ನ ಹಿಂಭಾಗದ ಗೋಡೆ ಕೊರೆದು ಕಳ್ಳರು ಒಳ ನುಗ್ಗಿದ್ದಾರೆ. ಆದರೆ ಒಳಗೆ ಕಳ್ಳತನ ಮಾಡಲು ಸಿಗದೇ ವಾಪಸ್ ಬಂದಿದ್ದಾರೆ. ಭಾನುವಾರ ಬಾರ್‌ನ ಮಾಲೀಕರು ಬಾರ್ ಕಡೆ ಬಂದಾಗ ಹಿಂಬದಿ ಕನ್ನ ಹಾಕಿರುವುದು ಗಮನಕ್ಕೆ ಬಂದಿದೆ. ಸ್ಥಳಕ್ಕೆ ತುಂಗಾನಗರ ಪೊಲೀಸರು ಹಾಗೂ ಅಬಕಾರಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss