Thursday, August 18, 2022

Latest Posts

ಲಾಕ್‌ಡೌನ್ ನಡುವೆಯೂ ಇಯರ್‌ಫೋನ್ ಪ್ರಿಯರಿಗೆ ಸಿಹಿ ಸುದ್ದಿ : ಮಾರುಕಟ್ಟೆಯಲ್ಲಿ ಅಗ್ಗದ ಇಯರ್‌ಫೋನ್

ಲಾಕ್‌ಡೌನ್‌ನಲ್ಲಿ ಇಯರ್‌ಫೋನ್‌ಗಳ ಡಿಮ್ಯಾಂಡ್ ಹೆಚ್ಚಿದೆ. ಆಫೀಸಿಗಿಂತ ಮನೆಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿರುವುದರಿಂದ ಇಯರ್‌ಫೋನ್ ಅತ್ಯಾವಶ್ಯ.ಅದರಲ್ಲೂ ಕೈಯಲ್ಲಿ ಕೀಬೋರ‍್ಡ್ ಕುಟ್ಟುತ್ತಾ, ಕಿವಿಯಲ್ಲಿ ಹಾಡು ಕೇಳುತ್ತಾ ಕೆಲಸ ಮಾಡುತ್ತಿದ್ದರೆ, ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಇಯರ್‌ಫೋನ್‌ಗಳ ಬೇಡಿಕೆ ಹೆಚ್ಚಾಗಿರುವುದರಿಂದ ಮಾರ್ಕೆಟ್‌ನಲ್ಲಿ ದೊರೆಯುತ್ತಿರುವ ಅಗ್ಗದ ಇಯರ್‌ಫೋನ್‌ಗಳ ಬಗ್ಗೆ ಮಾಹಿತಿ ಪ್ರತಿಯೊಬ್ಬರಿಗೂ ಅವಶ್ಯವಾಗಿದೆ.
ಅಗ್ಗದ ಬೆಲೆಗೆ ಯಾವುದೋ ಕಂಪನಿಯ ಇಯರ್‌ಫೋನ್ ತಂದು ಸ್ವಲ್ಪ ದಿನದಲ್ಲೇ ಹಾಳಾಯಿತೆಂದು ಬೇಸರ ಪಟ್ಟುಕೊಳ್ಳುವ ಬದಲು ಸಾವಿರಕ್ಕೂ ಕಡಿಮೆ ಬೆಲೆಯಲ್ಲಿ ಸಿಗುವ ಬ್ರಾಂಡೆಡ್ ಇಯರ್‌ಫೋನ್‌ಗಳನ್ನು ಬಳಸಬಹುದಿದೆ. ಜೆಬಿಎಲ್ ಟಿ-೨೧೦- ಜೆಬಿಎಲ್ ಕಂಪನಿ ಇಯರ್‌ಫೋನ್ ಹಾಗೂ ಹೆಡ್‌ಫೋನ್‌ಗಳಿಗೆ ಪ್ರಸಿದ್ಧಿ ಪಡೆದಿದೆ. ಈ ಕಂಪನಿಯ ಜೆಬಿಎಲ್ ಟಿ-೨೧೦ ಇಯರ್‌ಫೋನ್ ೮.೭ಎಮ್.ಎಮ್ ಆಡಿಯೋ ಡ್ರೈವರ್ ಸಾiರ್ಥ್ಯ ಹೊಂದಿದ್ದು, ನಿಯೋಡಿಮಿಯಮ್ ಮ್ಯಾಗ್ನೆಟ್ ಬೆಂಬಲ ಇದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ೮೨೫ ಇದೆ.
ಇನ್ನು ಸಾವಿರ ರೂ. ಅಗ್ಗ ಎನ್ನುವವರು ಎಮ್.ಐ ಕಂಪನಿಯ ಬೇಸಿಕ್ ಇಯರ್‌ಫೋನ್ಸ್ ಬಳಸಬಹುದು. ಮಾರುಕಟ್ಟೆಯಲ್ಲಿ ಇದರ ಬೆಲೆ ೫೦೦ ರೂಗಳಿವೆ. ಆನ್‌ಲೈನ್‌ನಲ್ಲಿ ೪೦೦ರೂಗೆ ಇದನ್ನು ಪಡೆಯಬಹುದಾಗಿದೆ. ಇದರಲ್ಲಿ ಅಲ್ಟ್ರಾ ಡೀಪ್ ಬಾಸ್ ಹೊಂದಿದೆ. ಕಪ್ಪು ಹಾಗೂ ಕೆಂಪು ಬಣ್ಣದಲ್ಲಿ ಇಯರ್‌ಫೋನ್ ಲಭ್ಯವಿದೆ. ಅಲ್ಯುಮಿನಿಯಮ್ ಅಲ್ಲೊಯ್ ಹಾಗೂ ಸೌಂಡ್ ಚೇಂಬರ್ ಇರುವುದರಿಂದ ಧ್ವನಿ ಉತ್ತಮವಾಗಿ ಕೇಳಲಿದೆ.
ಬೋಟ್ ಕಂಪನಿಯ ಬಾಸ್‌ಹೆಡ್ ೨೨೫ ಇಯರ್‌ಫೋನ್ ೫೫೦ರೂಗೆ ದೊರೆಯಲಿದೆ. ಇದರಲ್ಲಿ ಸೋನಿಕ್ ಎಕ್ಸ್ಟ್ರಾ ಕ್ಲಾರಿಟಿ ಇರುವುದರಿಂದ ಸಂಗೀತ ಕೇಳುವ ಅನುಭವ ಅದ್ಭುತವಾಗಲಿದೆ. ಇದು ಪ್ಲಾಸ್ಟಿಕ್ ಇಯರ್‌ಫೋನ್ ಅಲ್ಲ. ಇಯರ್‌ಫೋನ್‌ನ ಕೇಬಲ್ ಗಂಟಾಗದಂತಿರಲು ಫ್ಲಾಟ್ ಕೇಬಲ್ ಬಳಸಲಾಗಿದೆ. ಕಲರ್‌ಗಳಲ್ಲಿ ಬಹಳಷ್ಟು ಆಯ್ಕೆಗಳಿವೆ.
ಸೋನಿ ಕಂಪನಿಯ ಎಂಡಿಆರ್ ಎಎಸ್-೨೧೦ ಇಯರ್ ಫೋನ್ ಸ್ಟೈಲ್‌ಗೆ ಹೆಸರುವಾಸಿ. ಇದರ ಲೂಪ್ ಹ್ಯಾಂಗರ್‌ಗಳು ಕಿವಿಗೆ ಸಿಕ್ಕಿಸಿಕೊಳ್ಳಲು ಅನುಕೂಲಕರವಾಗಿದೆ. ಎಲ್ಲಾ ಕಂಪನಿಯ ಮೊಬೈಲ್‌ಗಳಿಗೂ ಈ ಇಯರ್ ಫೋನ್‌ಗಳು ಸರಿ ಹೊಂದುತ್ತವೆ.ಈ ಮಾಡೆಲ್‌ನಲ್ಲಿ ಬಹಳಷ್ಟು ಕಲರ್‌ಗಳು ಲಭ್ಯವಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!