ಬೆಂಗಳೂರು: ಮೇ 24 ರಂದು ಮೇ 31 ರಂದು ನಿಗದಿಯಾಗಿರುವ ವಿವಾಹಗಳಿಗೆ ಲಾಕ್ಡೌನ್ ಮಾರ್ಗಸೂಚಿ ಅನ್ವಯವಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಮೊದಲೇ ನಿಶ್ಚಿತಗೊಂಡಿರುವ ವಿವಾಹಗಳಿಗೆ ಆಯಾ ಜಿಲ್ಲಾಧಿಕಾರಿಗಳು ಅನುಮತಿ ನೀಡಬೇಕೆಂದು ಸರ್ಕಾರ ತಿಳಿಸಿದೆ. ದೇಶದಲ್ಲಿ ಈ ತಿಂಗಳ ಕೊನೆವರೆಗೆ ಲಾಕ್ಡೌನ್ ಮುಂದುವರಿದಿದ್ದು, ಮದುವೆ ಮೊದಲಾದ ಕಾರ್ಯಕ್ರಮಗಳನ್ನು ನಿರ್ವಹಿಸುವ ಬಗ್ಗೆ ಸಾರ್ವಜನಿಕರು ಸರ್ಕಾರಕ್ಕೆ ಮನವಿ ಮಾಡಿದ್ದು , ಈ ದಿಶೆಯಲ್ಲಿ ಕೆಲವೊಂದು ನಿರ್ಬಂಧಗಳ ಮೇರೆಗೆ ಇದಕ್ಕೆ ಅನುಮತಿ ನೀಡಲಾಗಿದೆ. ಮದುವೆಯಲ್ಲಿ ೫೦ ಮಂದಿ ಮಾತ್ರ ಭಾಗವಹಿಸಲು ಅವಕಾಶವಿದೆ.