ಲಾಕ್‌ಡೌನ್ ಮಧ್ಯೆ ಸಂಗಾತಿ ಹುಡುಕುವುದು ಕಷ್ಟವಾಗಿದೆಯೇ? ಆನ್‌ಲೈನ್‌ನಲ್ಲಿದೆ ಅಪ್ಲಿಕೇಷನ್‌ಗಳು! (with Audio File)

0
191

ಲಾಕ್ ಡೌನ್ ಆಗಿದ್ದು, ಕೆಲ ದಿನ ದೇಶಕ್ಕೆ ದೇಶವೇ ನಿಂತಿದ್ದರೂ ಮದುವೆಗಳು ಮಾತ್ರ ನಿಲ್ಲಲಿಲ್ಲ. ೫೦ ಮಂದಿಯಾದರೂ ತೊಂದರೆಯಿಲ್ಲ, ಇನ್ನು ೨೦ ಜನರಾದರೆ ಸ್ವಲ್ಪ ಕಷ್ಟ ಆದರೂ ತೊಂದರೆಯಿಲ್ಲ. ಒಟ್ಟಾರೆ ಮದುವೆಗಳು ನಿಲ್ಲಬಾರದು. ಕೆಲವರಿಗೆ ಮದುವೆ ಹೇಗೆ ಮಾಡುವುದು ಎಂದು ಚಿಂತೆಯಾದರೆ, ಇನ್ನು ಕೆಲವರಿಗೆ ಮದುವೆಗೆ ಹುಡುಗ-ಹುಡುಗಿಯನ್ನು ಹುಡುಕುವುದು ಹೇಗೆ ಎನ್ನುವ ಚಿಂತೆ. ಹುಡುಗನಿಗೆ ಹುಡುಗಿ ಇಷ್ಟವಾದರೆ, ಹುಡುಗಿಗೆ ಹುಡುಗ ಹಿಡಿಸುವುದಿಲ್ಲ. ಇನ್ನು ಇಬ್ಬರಿಗೂ ಇಷ್ಟವಾದರೆ ಜಾತಕ ಕೂಡಿಬರುವುದಿಲ್ಲ. ಹೀಗೆ ಸಮಸ್ಯೆ ನೂರು. ಆದರೆ ವಧು ವರರ ಅನ್ವೇಷಣೆ ಅಷ್ಟೇನೂ ಕಷ್ಟದ ಕೆಲಸ ಅಲ್ಲ. ಅದರಲ್ಲೂ ಈಗಿನ ಟೆಕ್ನಾಲಜಿ ಯುಗದಲ್ಲಿ ಸಂಗಾತಿ ಹುಡುಕುವುದು ಸುಭವೇ ಹೌದು. ಹೇಗೆ ಇಲ್ಲಿ ನೋಡಿ..

  • ಆನ್‌ಲೈನ್‌ನಲ್ಲಿ ಸಾಕಷ್ಟು ಡೇಟಿಂಗ್ ಅಪ್ಲಿಕೇಶನ್‌ಗಳು ಇವೆ. ಇಲ್ಲಿ ಕೇವಲ ನಿಮ್ಮ ಆಸಕ್ತಿ, ಫೋಟೊ ಹೆಸರು ಅಷ್ಟೇ ಇರುತ್ತದೆ. ಹೇಳಲು ಆಗುವುದಿಲ್ಲ ನಿಮ್ಮ ಬಾಳ ಸಂಗಾತಿಯಾಗುವವರು ಇಂಥ ಅಪ್ಲಿಕೇಶನ್ ಬಳಸಿ ನಿಮ್ಮನ್ನೆ ಕಾಯುತ್ತಿರಬಹುದು.
  • ಇನ್ನು ಡೇಟಿಂಗ್ ಅಪ್ಲಿಕೇಷನ್‌ಗಳಲ್ಲಿ ಆಸಕ್ತಿ ಇಲ್ಲ ಎನ್ನುವವರು ನೇರ ಮ್ಯಾಟ್ರಿಮೊನಿ ಸೈಟ್‌ಗಳಲ್ಲಿ ಹುಡುಕಾಟ ಆರಂಭಿಸಬಹುದು.ಇಲ್ಲಿ ನಿಮ್ಮ ಆಸಕ್ತಿ,ಫೋಟೊ, ಫೋನ್ ನಂಬರ್, ಜಾತಕವೂ ಇರುತ್ತದೆ.
  • ಮ್ಯಾಟ್ರಿಮೊನಿ ಸೈಟ್‌ಗಳು ಸಾಗರದಂತೆ ಇರುತ್ತವೆ. ಇಂಥದರಲ್ಲಿ ನಮ್ಮದೇ ಜಾತಿಯ ಹುಡುಗ ಅಥವಾ ಹುಡುಗಿಯನ್ನು ಹೇಗೆ ಹುಡುಕುವುದು ಎನಿಸಬಹುದು. ಆದರೆ, ಇದಕ್ಕೂ ಇಲ್ಲಿ ಫಿಲ್ಟರ‍್ಸ್ ಇವೆ.
  • ಇನ್ನು ಕೇವಲ ಕಮ್ಯುನಿಟಿಗಳಿಗೆ ಅವರದ್ದೇ ಸೈಟ್‌ಗಳಿವೆ. ಅಲ್ಲಿ ಫಿಲ್ಟರ್ ಬಳಸುವುದೇ ಬೇಡ. ನಿಮ್ಮದೇ ಕಮ್ಯುನಿಟಿಯ ವಧು-ವರರನ್ನು ಇಲ್ಲಿ ಆರಿಸಬಹುದು.
  • ಮ್ಯಾಟ್ರಿಮೊನಿ ಸೈಟ್‌ಗಳನ್ನು ನಂಬಿ ಮದುವೆಯಾಗಬೇಕು ಎಂದೇನಿಲ್ಲ. ಮೆಸೇಜ್ ಮಾಡುವ ಫೆಸಿಲಿಟಿ ಇಲ್ಲಿದೆ. ನಿಮ್ಮ ನಂಬರ್ ಮೆಸೇಜ್ ಮಾಡಿದರೆ ಅವರು ನಿಮ್ಮನ್ನು ಸಂಪರ್ಕಿಸುತ್ತಾರೆ. ನಂತರ ನೀವು ಅವರ ಜೊತೆ ಮಾತನಾಡಿ, ನಿಮಗೆ ಇಷ್ಟವಾದರೆ ಮಾತ್ರ ಮುಂದುವರಿಯಬಹುದು.
  • ಇಲ್ಲಿ ಕೇವಲ ಮೊದಲನೆ ಮದುವೆಗೆ ಮಾತ್ರ ಆದ್ಯತೆ ಇಲ್ಲ. ಎರಡನೇ ಮದುವೆ ಮಾಡಿಕೊಳ್ಳುವವರು ಇದನ್ನು ಬಳಸಬಹುದು. ನೀವಷ್ಟೇ ಅಲ್ಲ, ನಿಮ್ಮ ತಾಯಿ, ತಂದೆ, ಅಣ್ಣ, ಸ್ನೇಹಿತ ಯಾರಾದರೂ ನಿಮಗೆ ವಧು-ವರರನ್ನು ಇಲ್ಲಿ ಹುಡುಕಬಹುದು.
  • ಆನ್‌ಲೈನ್ ಸೈಟ್‌ಗಳನ್ನು ನಂಬಿ ಮೋಸ ಹೋದವರೂ ಇದ್ದಾರೆ. ಫೇಕ್ ಅಕೌಂಟ್‌ಗಳ ಹಾವಳಿಯೂ ಇದೆ. ಎಷ್ಟೇ ಹಿಡಿಸಿದರೂ ಬ್ಯಾಕ್‌ಗ್ರೌಂಡ್ ಚೆಕ್ ಮಾಡದೇ ಮುಂದುವರಿಯಬೇಡಿ.

LEAVE A REPLY

Please enter your comment!
Please enter your name here