ಹೊಸ ದಿಗಂತ ಆನ್ ಲೈನ್ ಡೆಸ್ಕ್:
ರಕ್ಷಿತ್ ಶೆಟ್ಟಿಯ ‘ಚಾರ್ಲಿ’ ಈಗ ದೂರದ ಕಾಶ್ಮೀರದಲ್ಲಿ ಸದ್ದು ಮಾಡುತ್ತಿದೆ.
ಬಹು ನಿರೀಕ್ಷೆಯ ’777 ಚಾರ್ಲಿ’ ಚಿತ್ರದ ಚಿತ್ರೀಕರಣ ಅಂತಿಮ ಹಂತಕ್ಕೆ ತಲುಪಿದ್ದು, ಬಹುಮುಖ್ಯವಾದ ದೃಶ್ಯಗಳನ್ನು ಸೆರೆಹಿಡಿಯಲು ಚಿತ್ರತಂಡ ಈಗಾಗಲೇ ಅಲ್ಲಿ ಮೊಕ್ಕಾಂ ಹೂಡಿದೆ. ನಿರ್ದೇಶಕ ಕಿರಣ್ ರಾಜ್ ಸಹಿತಟ್ಟು ೫೬ ಮಂದಿ ಈಗಾಗಲೇ ಕಾಶ್ಮೀರ ತಲುಪಿದ್ದಾರೆ. ರಕ್ಷಿತ್ ಶೆಟ್ಟಿ ನ.26 ರಂದು ಅವರನ್ನು ಸೇರಿಕೊಳ್ಳಲಿದ್ದಾರೆ.
ಒಟ್ಟು 14 ದಿನಗಳ ಕಾಲ ಅಲ್ಲಿ ಶೂಟಿಂಗ್ ನಡೆಯಲಿದ್ದು, ಈ ವೇಳೆ ಕಾಶ್ಮೀರ, ಚಂಡಿಗಡ ಮತ್ತು ಹಿಮಾಚಲ ಪ್ರದೇಶಗಳಲ್ಲಿ ದೃಶ್ಯಗಳನ್ನು ಚತ್ರೀಕರಿಸಲು ತಂಡ ಯೋಜನೆ ಹಾಕಿಕೊಂಡಿದೆ.
ಅಭಿಜಿತ್ ಮಹೇಶ್ ಸಂಭಾಷಣೆ ಇರುವ ಈ ಸಿನೆಮಾಗೆ ನೊಬಿಲ್ ಪೌಲ್ ಮತ್ತು ಅರವಿಂದ್ ಕಶ್ಯಪ್ ಸಂಗೀತ ನೀಡಿದ್ದಾರೆ. ರಾಜ್ ಬಿ. ಶೆಟ್ಟಿ, ಡ್ಯಾನಿಶ್ ಸೇಟ್, ಮತ್ತು ಸಂಗೀತ ಶೃಂಗೇರಿ ಮುಖ್ಯ ತಾರಾಗಣದಲ್ಲಿದ್ದಾರೆ.