ಬದಿಯಡ್ಕ: ಕರೊನಾ ವೈರಸ್ ಬಾಧೆಯಿಂದ ಲಾಕ್ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಸಂಪೂರ್ಣ ಕಾರ್ಯಕ್ರಮಗಳು ರದ್ದಾಗಿದ್ದು, ವಿಶೇಷವೆಂಬಂತೆ ಮೊದಲ ಬಾರಿಗೆ ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಗೂಗಲ್ ಮೀಟ್ ಮೂಲಕ ಜಿಲ್ಲೆಯ ಕನ್ನಡ ಪತ್ರಕರ್ತರೊಂದಿಗೆ ಸಂವಾದ ನಡೆಸಿ ಯೋಗಕ್ಷೇಮ ವಿಚಾರಿಸಿ ಮಾಹಿತಿ ಹಂಚಿಕೊಂಡರು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜಾಲತಾಣ ಗೂಗಲ್ ಮೀಟ್ ಮೂಲಕ ಕಾಸರಗೋಡಿನ ಕನ್ನಡ ಪತ್ರಕರ್ತರೊಂದಿಗೆ ನೇರ ಸಂವಾದ ಸುಧೀರ್ಘ ಒಂದು ಗಂಟೆಗಳಷ್ಟು ಹೊತ್ತು ನಡೆಯಿತು. ಕರೊನಾ ಕಾರಣ ಪತ್ರಕರ್ತರು ಸಂಕಷ್ಟಕ್ಕೊಳಗಾಗಿದ್ದಾರೆ.
ಸಮಾಜದ ಎಲ್ಲಾ ಆಗುಹೋಗುಗಳ ನಿಖರತೆಗಳನ್ನು ಸಮರ್ಥವಾಗಿ ದಾಖಲಿಸುವ ಮೂಲಕ ಕಣ್ಣುಗಳಂತಿರುವ ಪತ್ರಕರ್ತರ ಆಶೋತ್ತರಗಳಿಗೆ ಸಂಬಂಧಿಸಿ ಅಗತ್ಯದ ನೆರವುಗಳಿಗೆ ಸರ್ಕಾರಗಳನ್ನು ಕೇಳಿಕೊಳ್ಳಲಾಗುವುದು ಎಂದು ಕೆ.ಶ್ರೀಕಾಂತ್ ಸಂವಾದದಲ್ಲಿ ತಿಳಿಸಿದರು.
ಸಂವಾದದಲ್ಲಿ ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಯಾದವ್ ತೆಕ್ಕೆಮೂಲೆ, ಕಾರ್ಯದರ್ಶಿ ಅಚ್ಚುತ ಚೇವಾರ್, ಪತ್ರಕರ್ತರುಗಳಾದ ರಾಜಶೇಖರ್, ವಿವೇಕ್ ಆದಿತ್ಯ, ಸಾಯಿಭದ್ರಾ ರೈ, ಚೇತನ್ ನೆಟ್ಟಣಿಗೆ, ಶಾಮಪ್ರಸಾದ ಸರಳಿ, ಅಜಿತ್ ಸ್ವರ್ಗ, ರಾಮಚಂದ್ರ ಬಲ್ಲಾಳ್ ನಾಟೆಕಲ್ಲು, ಪ್ರದೀಪ್ ಕುಮಾರ್ ಬೇಕಲ್, ಸುಬ್ರಹ್ಮಣ್ಯ ಪೆರಿಯಪ್ಪಾಡಿ ಮೊದಲಾದವರು ಪಾಲ್ಗೊಂಡಿದ್ದರು. ಗಂಗಾಧರ ಯಾದವ್ ತೆಕ್ಕೆಮೂಲೆ ಸಮನ್ವಯಕಾರರಾಗಿ ನಿರ್ವಹಿಸಿದರು.