ದಿಲ್ಲಿ: ಮಾರ್ಚ್ ೨೪ರಿಂದ ಮೇ ಅಂತ್ಯದವರೆಗೆ ಲಾಕ್ಡೌನ್ ಅವಯಲ್ಲಿ ರಸ್ತೆ ಅಪಘಾತ-ಸಾವಿನ ಪ್ರಮಾಣ ಶೇ. ೬೨ರಷ್ಟು ಕಡಿಮೆಯಾಗಿದೆ. ಸುಮಾರು ೨೪ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಸ್ತೆ ಅವಘಡಗಳಿಂದ ಸಂಭವಿಸಿದ ಸಾವಿನ ಸಂಖ್ಯೆ ೮,೯೭೬, ಅವಘಡಗಳು ೨೫೦೦೦ ಮತ್ತು ೨೬೦೦೦ ಜನರು ಗಾಯಗೊಂಡಿದ್ದಾರೆ. ೨೦೧೯ರ ಇದೇ ಅವಯಲ್ಲಿ ಸಂಭವಿಸಿದ ಅವಘಡ-ಸಾವು ನೋವುಗಳನ್ನು ಲೆಕ್ಕ ಹಾಕಿದಾಗಿ ಈ ವರ್ಷ ಸಾವು – ನೋವಿನ ಪ್ರಮಾಣ ತೀರಾ ಕಡಿಮೆ.
ಲಾಕ್ಡೌನ್ ಸಂದರ್ಭ ಮಹಾರಾಷ್ಟ್ರದಲ್ಲಿ ರಸ್ತೆ ಅವಘಡಗಳಿಂದ ಮೃತಪಟ್ಟವರ ಸಂಖ್ಯೆ ೧೬೩೨ಕ್ಕಿಳಿದಿದೆ. ರಾಜಸ್ಥಾನದಲ್ಲಿ ೧,೧೭೧, ಗುಜರಾತ್ -೯೦೦, ಬಿಹಾರ ೮೯೮, ತೆಲಂಗಾಣದಲ್ಲಿ ೬೦೪ ಅವಘಡ ಸಾವು ಸಂಭವಿಸಿದೆ. ಚಂಡೀಗಢ, ಡಿಯು, ದಾಮನ್ಗಳಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ರಾಜ್ಯಗಳ ಪೈಕಿ ಉತ್ತರಾಖಂಡದಲ್ಲಿ ಸಾವು ನೋವಿನ ಸಂಖ್ಯೆ ತೀರಾ ಕಡಿಮೆ ಮತ್ತು (ಶೇ. ೯೦ರಷ್ಟು) ನಂತರದ ಸ್ಥಾನದಲ್ಲಿದೆ. ಕೇರಳ ಇಲ್ಲಿ ಅವಘಡ ಸಾವು ನೋವಿನ ಪ್ರಮಾಣದಲ್ಲಿ ಶೇ.೮೮.೭ ದಷ್ಟು ಇಳಿಕೆಯಾಗಿದೆ.
ಹಾಗೆಂದು ೬೯ ದಿನಗಳ ಲಾಕ್ಡೌನ್ ಅವಯಲ್ಲಿ ಅವಘಡ ತೀವ್ರತೆ ಮಾತ್ರ ಕಳೆದ ವರ್ಷಕ್ಕಿಂತ ಜಾಸ್ತಿ. ಕಳೆದ ವರ್ಷ ಇದೇ ಅವಯಲ್ಲಿ ಪ್ರತೀ ನೂರು ಅವಘಡಗಳಲ್ಲಿ ೩೯ ಮಂದಿ ಮೃತಪಟ್ಟಿದ್ದರು. ಈ ವರ್ಷ ಈ ಸಂಖ್ಯೆ ೪೬ಕ್ಕೆ ನೆಗೆದಿದೆ. ಸರ್ವೋಚ್ಚ ನ್ಯಾಯಾಲಯದ, ರಸ್ತೆ ಸುರಕ್ಷಣೆಗೆ ಸಂಬಂಧಪಟ್ಟ ಸಮಿತಿಗೆ ಸಲ್ಲಿಸಿರುವ ಅಂಕಿ ಅಂಶಗಳಲ್ಲಿ ಈ ಮಾಹಿತಿ ನೀಡಲಾಗಿದೆ.