ಲಾಕ್ಡೌನ್ನಿಂದ ಚಿತ್ರಮಂದಿರಗಳ ಬಂದ್ ಆಗಿ ಬರೋಬ್ಬರಿ ನಾಲ್ಕು ತಿಂಗಳು ಕಳೆದಿದೆ.
ಮನರಂಜನೆಗೆ ಸದ್ಯಕ್ಕಿರುವುದು ಟಿವಿ ಒಂದೇ. ಕುಟುಂಬ ಸದಸ್ಯರು ‘ಧಾರಾವಾಹಿಗಳನ್ನು ನೋಡಿಕೊಂಡು ಸಮಯಕಳೆಯುತ್ತಿದ್ದರು. ಆದರೆ ಈಗ ಅದಕ್ಕೂ ಕುತ್ತು ಬಂದಿದೆ. ಕೆಲವು ದಿನಗಳ ಹಿಂದಷ್ಟೆ ಚಿತ್ರೀಕರಣವನ್ನು ಪುರ್ನ ಪ್ರಾರಂಭಿಸಿದ್ದ ಕನ್ನಡದ ‘ಧಾರಾವಾಹಿಗಳು ಈಗ ಮತ್ತೆ ಚಿತ್ರೀಕರಣ ನಿಲ್ಲಿಸುವಂತಾಗಿದೆ. ಹೌದು, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ವಿವಿ‘ ೧೨ ಜಿಲ್ಲೆಗಳಲ್ಲಿ ಒಂದು ವಾರಗಳ ಕಾಲ ಲಾಕ್ಡೌನ್ ಘೋಷಣೆ ಆಗಿರುವ ಕಾರಣ ‘ಧಾರಾವಾಹಿಗಳು ಮತ್ತೆ ಚಿತ್ರೀಕರಣ ಬಂದ್ ಮಾಡುವ ಒತ್ತಡಕ್ಕೆ ಸಿಲುಕಿವೆ.
ಸರ್ಕಾರ ಹಾಗೂ ಕೆಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕೊರೊನಾ ಸೋಂಕು ತಡೆಗಟ್ಟಲು ಒಂದು ವಾರಗಳ ಲಾಕ್ಡೌನ್ ವಿಧಿಸಿರುವ ಕಾರಣ ಅವಶ್ಯಕ ವಸ್ತುಗಳ ಮಾರಾಟ ಹೊರತಾಗಿ ಇನ್ನಾವುದೇ ಕಾರ್ಯ ಮಾಡುವಂತಿಲ್ಲ. ಹಾಗಾಗಿ ಚಿತ್ರೀಕರಣ ಸಹ ಬಂದ್
ಆಗಲಿದೆ.