Tuesday, August 16, 2022

Latest Posts

ಲಾಕ್ ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಪೂರ್ತಿ ವೇತನ: ಇಂದು ಸುಪ್ರೀಂ ತೀರ್ಪು

ಹೊಸದಿಲ್ಲಿ: ದೇಶದಲ್ಲಿ ಕೊರೋನಾ ಲಾಕ್ ಡೌನ್ ಅವಧಿಯಲ್ಲಿ ಎಲ್ಲಾ ಕಾರ್ಮಿಕರು ಸಂಕಷ್ಟದಲ್ಲಿರುವ ಹಿನ್ನಲೆ ಅವರಿಗೆ ಪೂರ್ಣ ವೇತನ ನೀಡಲು ಸಲ್ಲಿಸಿದ್ದ ಕೇಂದ್ರದ ಆದೇಶವನ್ನು ಸುಪ್ರೀಂ ಇಂದು ತೀರ್ಪು ನೀಡಲಿದೆ.

ಮಾರ್ಚ್ ತಿಂಗಳಲ್ಲಿ ದೇಶದಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದು, ಅಂದಿನಿಂದ ದೇಶದಲ್ಲಿ ಎಲ್ಲಾ ಚಟುವಟಿಕೆಗಳನ್ನು ನಿರ್ಬಂಧನೆ ಹೇರಲಾಗಿತ್ತು. ಈ ಸಂಕಷ್ಟದ ವೇಳೆಯಲ್ಲಿ ದೇಶದ ವಿವಿಧ ಸಂಸ್ಥೆಗಳು ತಮ್ಮ ಕಾರ್ಮಿಕರಿಗೆ ನೀಡಬೇಕಾದ ಮಾಸಿಕ ಸಂಬಳವನ್ನು ಕಡಿತಗೊಲಿಸುತ್ತಿತ್ತು.

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಲಾಕ್ ಡೌನ್ ವೇಳೆಯಲ್ಲಿ ಎಲ್ಲಾ ಕಾರ್ಮಿಕರಿಗೂ ಪೂರ್ತಿ ವೇತನ ನೀಡುವಂತೆ ಆದೇಶ ನೀಡಿತ್ತು.  ಲಾಕ್ ಡೌನ್ ಅವಧಿಯಲ್ಲಿ ಯಾವ ಸಂಸ್ಥೆಯಲ್ಲಿಯೂ ಲಾಭದಾಯಕ ವ್ಯವಹಾರ ನಡೆಯದ ಹಿನ್ನಲೆ ಕೇಂದ್ರ ಸರ್ಕಾರದ ಆದೇಶವನ್ನು ವಿರೋಧಿಸಿ, ಖಾಸಗಿ ಸಂಸ್ಥೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಇಂದು ಕೇಂದ್ರ ಸರ್ಕಾರ ಹೊರಡಿಸಿದ ಆದೇಶವನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಿ ತೀರ್ಪು ನೀಡಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss