Thursday, June 30, 2022

Latest Posts

ಲಾಕ್ ಡೌನ್ ಆದೇಶವಿದ್ದರೂ ಕೂಡ ಸುಖಾಸುಮ್ಮನೆ ಬೀದಿಗಿಳಿಯುತ್ತಿದ್ದ ಪುಂಡರಿಗೆ ಬಸ್ಕಿ ಶಿಕ್ಷೆ!

ಹಾಸನ: ಲಾಕ್ ಡೌನ್ ಆದೇಶವಿದ್ದರೂ ಕೂಡ ಸುಖಾಸುಮ್ಮನೆ ಬೀದಿಗಿಳಿಯುತ್ತಿದ್ದ ಪುಂಡರಿಗೆ ಟ್ರಾಫಿಕ್ ಪೊಲೀಸರು ಸೋಮವಾರ ಬೆಳಗ್ಗೆ ಬಿಸಿ ಮುಟ್ಟಿಸಿದ್ದಾರೆ.
ಸೋಮವಾರ ಬೆಳಗ್ಗೆ ನಗರದ ಡೈರಿ ವೃತ್ತದಲ್ಲಿ ಸಕಾರಣವಿಲ್ಲದೇ ರಸ್ತೆಗಿಳಿದಿದ್ದ ಹತ್ತಾರು ಬೈಕ್ ಗಳನ್ನು ವಶಕ್ಕೆ ಪಡೆದ ಟ್ರಾಫಿಕ್ ಪೊಲೀಸರು, ಬಸ್ಕಿ ಹೊಡೆಸಿ ಲಾಕ್ ಡೌನ್ ಆದೇಶ ಉಲ್ಲಂಘಟನೆ ಪ್ರಕರಣ ದಾಖಲಿಸಿದ್ದಾರೆ.
ಪ್ರತಿನಿತ್ಯ ಬೆಳಗ್ಗಿನ ಸಮಯದಲ್ಲಿ ಸಕಾರಣವಿಲ್ಲದೇ ನಗರದಾದ್ಯಂತ ಸಾವಿರಾರು ಬೈಕ್ ಗಳು ರಸ್ತೆಗಿಳಿಯುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರು ಇದೀಗ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದು, ಅನಗತ್ಯವಾಗಿ ಸಂಚರಿಸುವವರ ವಿರುದ್ಧ ಇನ್ನು ಕಠಿಣ ಕ್ರಮಕ್ಕೆ ಮನವಿ ಮಾಡಿದ್ದಾರೆ.
ಲಾಕ್ ಡೌನ್: ಆದೇಶ ಮೀರಿದವರ ಮೇಲೆ ಕೇಸು
ಲಾಕ್ ಡೌನ್ ಆದೇಶವಿದ್ದರೂ ಕೂಡ ಹೊರರಾಜ್ಯದಿಂದ ಜಿಲ್ಲೆಗೆ ಅತಿಕ್ರಮ ಪ್ರವೇಶ ಮಾಡಿದ 9 ಮಂದಿಯನ್ನು ಹೋಂ ಕ್ವಾರಂಟೈನ್ ನಲ್ಲಿ ಇಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆಂಧ್ರಪ್ರದೇಶದ ಗದ್ವಾಲ್ ನಲ್ಲಿ ಬೇಕರಿ ಕೆಲಸ ಮಾಡಿಕೊಂಡಿದ್ದ ಸ್ಥಳೀಯ 9 ಮಂದಿ ಕಳೆದ ರಾತ್ರಿ ಸ್ವಗ್ರಾಮಕ್ಕೆ ಆಗಮಿಸಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬೇಲೂರು ತಹಸೀಲ್ದಾರ್, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಸಿಬ್ಬಂದಿ ಆಂಧ್ರದಿಂದ ಜಿಲ್ಲೆಗೆ ಬರಲು ಬಳಸಿದ ಟಾಟಾ ಕ್ರೂಸರ್ ವಾಹನ, ಚಾಲಕ ಹಾಗೂ ವಾಹನದಲ್ಲಿ ಬಂದವರನ್ನು ವಶಕ್ಕೆ ಪಡೆದು ಕೇಸು ದಾಖಲಿಸಿದ್ದಾರೆ. ಅಲ್ಲದೇ ಹೋಂ ಕ್ವಾರಂಟೈನ್ ಗೆ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಹಳೇಬೀಡು ಠಾಣೆಯಲ್ಲಿ ತಪ್ಪಿತಸ್ಥರ ವಿರುದ್ಧ ಲಾಕ್ ಡೌನ್ ಉಲ್ಲಂಘನೆ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss