Thursday, June 30, 2022

Latest Posts

ಲಾಕ್ ಡೌನ್ ಆದೇಶ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ : ಮೂವರ ಬಂಧನ

ಕಾಸರಗೋಡು: ಲಾಕ್ ಡೌನ್ ಆದೇಶ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ ನಡೆಸಿದ ಆರೋಪದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕೋಡೋಂ-ಬೇಳೂರು ಗ್ರಾಮ ಪಂಚಾಯತ್‍ನ ಬೇಳೂರು ಗ್ರಾಮದ ಪೊರ್ಕಳಂ ಕೃಪಾ ನಿಲಯದಲ್ಲಿ ಚಟುವಟಿಕೆ ನಡೆಸುತ್ತಿರುವ ಎಂ.ಸಿ.ಬಿ.ಎಸ್.ಆಶ್ರಮದ ಮುಖ್ಯಸ್ಥ ಬೆನ್ನಿ ವರ್ಗೀಸ್(50), ಫಾದರ್ ಫ್ರಾನ್ಸಿಸ್ ಆಲಿಯಾಸ್ ವಿನೋದ್ (40), ಸಹಾಯಕ ಸೆಲ್ವನ್ವಿ ಟಿ.(54) ಯನ್ನು ಅಂಬಲತ್ತರ ಪೊಲೀಸರು ಬಂ„ಸಿದ್ದಾರೆ. ಈ ಆಶ್ರಮದಲ್ಲಿ 7 ಮಂದಿ ಸಾಮೂಹಿಕ ಪ್ರಾರ್ಥನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಅರಿತು ಪೆÇಲೀಸರು ದಾಳಿ ನಡೆಸಿದ್ದರು. ನಂತರ ಇವರನ್ನು ಜಾಮೀನು ಮೇರೆಗೆ ಬಿಡುಗಡೆಗೊಳಿಸಲಾಗಿದೆ. ಕೇರಳ ಸಾಂಕ್ರಾಮಿಕ ರೋಗ  ನಿಯಂತ್ರಣ ಮಂಡಳಿಯ ಕ್ರಮದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss