ಮುಂಬೈ: ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಬಾಲಿವುಡ್ ನಟಿ ಪೂನಂ ಪಾಂಡೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿ.ಎಂ.ಡಬಲ್ಯು ಕಾರ್ ನಲ್ಲಿ ತಮ್ಮ ಸ್ನೇಹಿತನ ಜೊತೆಯಲ್ಲಿ ಮರೇನಾ ಬೀಚ್ ನಲ್ಲಿ ತಿರುಗಾಡುತ್ತಿದ್ದ ಕಾರಣ ಪೊಲೀಸ್ ಅಧಿಕಾರಿಗಳು ಪೂನಂ ಪಾಂಡೆ ಹಾಗೂ ಸ್ನೇಹಿತ ಸ್ಯಾಮ್ ಅಹ್ಮದ್ ವಿರುದ್ಧ ಸೆಕ್ಷನ್ 269 (ಜೀವಕ್ಕೆ ಅಪಾಯ ತರುವ ರೋಗದ ಸೋಂಕನ್ನು ಹರಡುವ ನಿರ್ಲಕ್ಷದ ಕ್ರಿಯೆ) ಹಾಗೂ 188 (ಅಸಹಕಾರ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಮೃತ್ಯುಂಜಯ್ ಹಿರೇಮಠ ತಿಳಿಸಿದ್ದಾರೆ.
ಟ್ವಿಟರ್ ಟ್ರೆಂಡ್: ದೇಶಾದ್ಯಂತ ಎಲ್ಲರೂ ಲಾಕ್ ಡೌನ್ ನಿಯಮ ಪಾಲಿಸುತ್ತಿದ್ದು, ನಿಯಮ ಉಲ್ಲಂಘಿಸಿದ ಪೋನಂ ಪಾಂಡೆಯನ್ನು ಜನರು ಟ್ವಿಟರ್ ನಲ್ಲಿ ಟ್ರೆಂಡ್ ಮಾಡಿದ್ದಾರೆ.