Friday, July 1, 2022

Latest Posts

ಲಾಕ್ ಡೌನ್ ನಲ್ಲಿ ಸಿಲುಕಿದ್ದ 400 ದಿನಗೂಲಿ ನೌಕರರಿಗೆ ಆಶ್ರಯ: ಶಾಸಕ ಕೆ. ರಘುಪತಿ ಭಟ್

ಮಂಗಳೂರು: ಉತ್ತರ ಕರ್ನಾಟಕ ಮೂಲದ 400ಕ್ಕೂ ಹೆಚ್ಚು ವಲಸಿಗರು ಉಡುಪಿ ಸಮೀಪದ ಬೀಡಿನಗುಡ್ಡೆಯಲ್ಲಿ ಸಿಲುಕಿದ್ದಾರೆ. ಕೊರೋನಾ ಸೋಂಕು ಹಿನ್ನಲೆ ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳ ಗಡಿ ಬಂದ್ ಮಾಡಲಾಗಿದ್ದು, ಅವರಿಗೆ ಬೇಕಾದ ವ್ಯವಸ್ಥೆಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಶಾಸಕ ರಘುಪತಿ ಭಟ್ ಮುಂದಾಗಿದ್ದಾರೆ.

ಈ ಜನರು ತಮ್ಮ ಟ್ರಕ್ ಮತ್ತು ಟೆಂಪೋ ಗಳಲ್ಲಿ ತಮ್ಮ ಸ್ಥಳಕ್ಕೆ ಹೊರಟಿದ್ದರು, ಆದರೆ ಶಿರೂರು ಹತ್ತಿರದ ಜಿಲ್ಲಾ ಗಡಿಯಲ್ಲಿ ಪೋಲಿಸರು ಅವರನ್ನು ತಡೆದಿದ್ದಾರೆ. ಕೊರೋನಾ ಸೋಂಕು ವ್ಯಾಪಕವಾಗುವುದರಿಂದ ಜಿಲ್ಲಾಡಳಿತಗಳು ತಮ್ಮ ಜಿಲ್ಲೆಗಳ ಗಡಿ ಬಂದ್ ಮಾಡಿದ್ದು, ಯಾರೊಬ್ಬರು ಜಿಲ್ಲೆಯಿದ ಹೊರ ಹೋಗುವಂತಿಲ್ಲ ದು ತಿಳಿಸಿ. ಮಾ.28ರ ರಾತ್ರಿ ಕುಂದಾಪುರ ಪೊಲೀಸರು ಅವರಿಗೆ ಆಹಾರ ಮತ್ತು ಆಶ್ರಯ ನೀಡಿದ್ದಾರೆ.

ಸದ್ಯ ಬೀಡಿನಗುಡ್ಡೆಯಲ್ಲಿರುವ ದಿನಗೂಲಿ ಕಾರ್ಮಿಕರಿಗೆ ನೆರವು ನೀಡಲು ಉಡುಪಿ ಶಾಸಕ ಕೆ. ರಘುಪತಿ ಭಟ್ ಮುಂದಾಗಿದ್ದಾರೆ. ಈ ದಿನಗೂಲಿ ಜನರಿಗೆ ನಾವು 10 ದಿನಗಳವರೆಗೆ ತರಕಾರಿ ಮತ್ತು ಆಹಾರ ಧಾನ್ಯಗಳನ್ನು ನೀಡುತ್ತೇವೆ. ಯಾರೊಬ್ಬರೂ ಊಟವಿಲ್ಲದೆ ಸಂಕಟ ಪಡುವ ಅಗತ್ಯವಿಲ್ಲ. ನಾನು ಹಾಗೂ ಉಡುಪಿ ಜನರು ಅವರ ಆಹಾರ ವ್ಯವಸ್ಥೆ ನೋಡಿಕೊಳ್ಳಲಿದ್ದೇವೆ”ಎಂದು ರಘುಪತಿ ಭಟ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss