Sunday, June 26, 2022

Latest Posts

ಲಾಕ್ ಡೌನ್: ‘ಬಿಂದಾಸ್ ಬೈಕ್ ಸವಾರ’ರಿಗೆ ಪಿಪಿಇ ಕಿಟ್ ಮಾದರಿ ಗೊಣಿಚೀಲ ಹಾಕಿ ಎಚ್ಚರಿಸಿದ್ರು!

ಕೊಪ್ಪಳ: ಅನಗತ್ಯವಾಗಿ ಓಡಾಡುವ ಬೈಕ್ ಸವಾರರಿಗೂ ಪಾದಚಾರಿಗಳಿಗೂ ಕೊಪ್ಪಳ ಪೊಲೀಸ್‍ರು ವೈಧ್ಯರು ಬಳಸುವ ಪಿಪಿಇ ಕಿಟ್ ಮಾದರಿಯ ತಯಾರಿಸಿದ ಗೊಣಿಚೀಲವನ್ನು ಸವಾರರಿಗೆ ಹಾಕುವುದರ ಮೂಲಕ ಕೊರೋನಾ ಜಾಗೃತಿಯ ಜೋತೆಗೆ ಅನಗತ್ಯ ಓಡಾಡದಂತೆ ಎಚ್ಚರಿಕೆ ನೀಡಿದರು.
ಹೌದು. ಈಗಾಗಲೇ ಕೊಪ್ಪಳ ಪೊಲೀಸ್‍ರು ಅನಗತ್ಯ ಓಡಾಡುವ ಸವಾರರಿಗೆ ಲಾಠಿ ಏಟು ಬಸ್ಕಿ ಪಾಠ, ಹಿಡು ಕಾಯಿ ದೃಷ್ಠಿಸಿ ಹೊಡೆಯುವುದು, ಮಂಗಳಮುಖಿಯರಿಂದ ರಾಖಿ ಕಟ್ಟಿಸುವುದು, ಯಮಧರ್ಮದ ವೇಷದಲ್ಲಿ ಎಚ್ಚರಿಕೆ, ಈಗೆ ಅನೇಕ ಜಾಗೃತಿ ಮಾಡಿದರೂ ಕೂಡ ಬೈಕ್ ಸವಾರರ ಓಡಾಟ ಮಾತ್ರ ಹಾಗೆ ಮುಂದುವರೆದಿತ್ತು.
ಆದರೆ ಕೊಪ್ಪಳ ಜಿಲ್ಲೆ ಗ್ರೀನ್ ವಲಯದಲ್ಲಿದೆ. ಇದರಿಂದ ಕೊಂಚ್ ಸಲಡಲಿಕೆ ಸುದ್ದಿ ತಿಳಿದ ಬೈಕ್ ಸವಾರರು ಗುರುವಾರ ಬೆಳಿಗ್ಗೆಯಿಂದಲೇ ಓಡಾಟವೂ ಹೆಚ್ಚಾಗಿತ್ತು. ಇದನ್ನು ಮನಗಂಡ ನಗರ ಠಾಣೆಯ ಪಿಐ ಮೌನೇಶ ಪಾಟೀಲ್ ಅವರು ಅಶೋಕ ವೃತ್ತದಲ್ಲಿ ಹಾಗೂ ಗಡಿಯಾರ ಕಂಭದ ಚೆಕ್ ಪೋಸ್ಟ್‍ನಲ್ಲಿ ನಿಂತುಕೊಂಡು ಅನಗತ್ಯವಾಗಿ ಓಡಾಡುವ ಬೈಕ್ ಸವಾರರನ್ನು ಹಿಡಿದು ಪಿಪಿಇ ಕಿಟ್ ಮಾದರಿಯಲ್ಲಿಯೇ ಗೊಣಿ ಚಿಲದಿಂದ ತಯಾರಿಸಿದ್ದ ಕಿಟ್‍ನ್ನು ಸವಾರರಿಗೆ 20 ನಿಮಿಷಗಳ ಕಾಲ ಅವರಿಗೆ ಹಾಕಿ ಜಾಗೃತಿ ಮೂಡಿಸಲಾಯಿತು.
ಆದರೆ 20 ನಿಮೀಷ ಗೊಣಿಚೀಲ ಹಾಕಿಕೊಂಡ ಸವಾರರು ಸರ್ ಇನ್ನೊಮ್ಮೆ ಬರುವುದಿಲ್ಲ ಬಿಟ್ಟು ಬೀಡಿ, ಒಳಗಡೆ ಬಹಳ ಜಳವಾಗುತ್ತದೆ ಇದರಿಂದ ಬಿಲಿನಲ್ಲಿ ನಿಲ್ಲಲು ಆಗುತ್ತಿಲ್ಲ. ಇನ್ನೋಮ್ಮೆ ಬರುವುದಿಲ್ಲ ಬಿಟ್ಟು ಬೀಡಿ ಸರ್ ಎಂದು ಮನವಿ ಮಾಡುತ್ತಿರುವುದು ಕಂಡು ಬಂದಿತು.
ಇದರಿಂದ ನಗರ ಠಾಣೆಯ ಪಿಐ ಮೌನೇಶ ಪಾಟೀಲ್ ಮಾತನಾಡಿ, ನಿಮಗೆ 20 ನಿಮೀಷ ಈ ಕಿಟ್ ಹಾಕಿಕೊಂಡದ್ದಕ್ಕೆ ಇಷ್ಟು ತೊಂದರೆಯಾಗುತ್ತದೆ. ಆದರೆ ನೀವು ಮಾಡುವ ತಪ್ಪಿನಿಂದ ಕೊರೋನಾ ಹಚ್ಚಿಕೊಂಡ ನಿಮಗೆ ಚಿಕಿತ್ಸೆ ನೀಡಲು 8 ತಾಸು ಪಿಪಿಇ ಕಿಟ್‍ಗಳನ್ನು ಹಾಕಿಕೊಂಡು ನೀರು, ಚಹ, ಊಟ ಮಾಡದೇ ನಿಂತಿರುವ ವೈಧ್ಯರಿಗೆ ಎಷ್ಟು ತೊಂದರೆಯಾಗಿರಬಹುದು ಸ್ವಲ್ಪ ಯೋಚಿಸಿ, ನೀವು ಮಾಡುವ ಅನಗತ್ಯ ಓಡಾಟದ ತಪ್ಪಿನಿಂದಾಗಿ ಕೊರೋನಾ ಬರಿಸಿಕೊಂಡು ವೈಧ್ಯರಿಗೆ, ನಿಮ್ಮ ಕುಟುಂಬದವರಿಗೆ ಹಾಗೂ ಜನರಿಗೆ ಯಾಕೆ ತೊಂದರೆ ಕೊಡುತ್ತಿರಾ. ಸ್ವಲ್ಪ ದಿನ ಮನೆಯಲ್ಲಿಯೇ ಇರಿ ನಂತರ ನಿಮ್ಮ ಜೀವ ಉಳಿದರೆ ನಿಮಗೆ ಎಷ್ಟು ಬೇಕಾದರೂ ಓಡಾಲು ಸಿಗುತ್ತದೆ ಆದ್ದರಿಂದ ಅನಗತ್ಯವಾಗಿ ಓಡಾಟವನ್ನು ನಿಲ್ಲಿಸಿ ಮನೆಯಲ್ಲಿಯೇ ಇದ್ದು ಸಹಕರಿಸಬೇಕು ಎಂದು ಮನವಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss