ಹೊಸದಿಲ್ಲಿ: ದೇಶಾದ್ಯಂತ ಮೇ.17ರವರೆಗೂ ಲಾಕ್ ಡೌನ್ ವಿಸ್ತರಣೆಯಾಗಲಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಶುಕ್ರವಾರ ಉನ್ನತ ಮಟ್ಟದ ಸಭೆ ನಡೆಸಿದ ಕೇಂದ್ರ ಸರ್ಕಾರ, ಮೇ.3ರ ನಂತರ ಲಾಕ್ ಡೌನ್ ವಿಸ್ತರಣೆಯಾಗುವುದೆಂದು ತಿಳಿಸಿದೆ.
ಕೊರೋನಾ ನಿಯಂತ್ರಿಸಲು ಕೇಂದ್ರ ಸರ್ಕಾರ ಮೇ.3ರ ನಂತರ ಮೂರನೇ ಬಾರಿಗೆ 2 ವಾರಗಳ ಕಾಲ ಲಾಕ್ ಡೌನ್ ವಿಸ್ತರಿಸಿದೆ.
ಈಗಾಗಲೇ ಗೃಹ ಸಚಿವಾಲಯ ಸೂಚಿಸಿದ ಹಾಗೆ ರೆಡ್, ಆರೆಂಜ್ ಯೆಲ್ಲೋ ಹಾಗೂ ಗ್ರೀನ್ ಜೋನ್ ಗಳಾಗಿ ವಿಗಂಡಿಸಿದ್ದು, ಕೊರೋನಾ ಸೋಂಕಿತ ಪ್ರದೇಶಗಳಿಗೆ ಲಾಕ್ ಡೌನ್ ವಿಸ್ತರಣೆ ಮುಂದುವರೆಯಲಿದ್ದು, ಗ್ರೀನ್ ಜೋನ್ ಪ್ರದೇಶಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗುತ್ತದೆ ಎಂದು ತಿಳಿಸಿದೆ.