ನವದೆಹಲಿ: ಕೊರೋನಾ ಲಾಕ್ ಡೌನ್ 4.0 ಕೊನೆಯ ಹಂತದಲ್ಲಿದ್ದು, ದೇಶದಲ್ಲಿ ಐದನೇ ಹಂತದ ಲಾಕ್ ಡೌನ್ ಬೇಕೇ ಬೇಡವೇ? ಬೇಕಿದ್ದರೆ ಹೇಗಿರಬೇಕು ಎಂಬ ಬಗ್ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಮಹತ್ವದ ಮಾತುಕತೆ ನಡೆಸಿದ್ದಾರೆ.
ಈ ಚರ್ಚೆಗೂ ಮುನ್ನ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಶಾ ಸಮಾಲೋಚನೆ ನಡೆಸಿದ್ದರು. ಅವರುಗಳ ಅಭಿಪ್ರಾಯಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ಜೊತೆ ಮಾತುಕತೆ ನಡೆದಿದ್ದು, ಕೇಂದ್ರ ಲಾಕ್ ಡೌನ್ 5.0 ಬಗ್ಗೆ ತೆಗೆದುಕೊಳ್ಳಲಿರುವ ತೀರ್ಮಾನ ಶೀಘ್ರ ಹೊರಬೀಳಲಿದೆ.
ಕರ್ನಾಟಕದಲ್ಲಿ ಹೇಗೆ?
ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸೇರಿದಂತೆ ಸುಮಾರು ೧೧ ಪ್ರಮುಖ ನಗರಗಳಲ್ಲಿ ಲಾಕ್ ಡೌನ್ ವಿಸ್ತರಿಸಲು ಕೇಂದ್ರ ತೀರ್ಮಾನಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಏನೇ ಇದ್ದರೂ ಕೇಂದ್ರದ ತೀರ್ಮಾನ ಹೊರಬಿದ್ದ ಬಳಿಕವಷ್ಟೇ ಲಾಕ್ ಡೌನ್ ೫.೦ ಸ್ಪಷ್ಟ ಚಿತ್ರಣ ಸಿಗಲಿದೆ.