ಬೀದರ: ಏಪ್ರೀಲ್ 8 ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಹುಮನಾಬಾದ ಪಟ್ಟಣದ ಕಲ್ಲೂರ ರಸ್ತೆಯ ಸೇತುವೆ ಬಳಿಯ ಹನುಮಾನ ಮಂದಿರ ಹತ್ತಿರ ಹುಮನಾಬಾದ ಪೊಲೀಸ್ ಠಾಣೆಯ ಎ.ಎಸ್.ಐ. ಬಸವರಾಜ ಅವರು ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಮುಂಜಾಗ್ರತಾ ಕ್ರಮ ಕುರಿತು ಕರ್ತವ್ಯದಲ್ಲಿದ್ದಾಗ, ವೀರಭದ್ರೇಶ್ವರ ಪ್ರೌಢ ಶಾಲೆ ಕ್ರಾಸ್ ಕಡೆಯಿಂದ ದ್ವಿಚಕ್ರ ವಾಹನದ ಮೇಲೆ ಬರುತಿದ್ದ 35 ವರ್ಷದ ಶೇಖ ನಸಿರೊದ್ದೀನ್ ಹಾಸುಮಿಯ್ಯಾ ಅವರಿಗೆ ಲಾಠಿಯಿಂದ ಹೊಡೆದು ಮೂಗಿಗೆ ಗಾಯಗೊಳಿಸಿದ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಆದ್ದರಿಂದ ಹುಮನಾಬಾದ ಪೊಲೀಸ್ ಠಾಣೆಯ ಎ.ಎಸ್.ಐ. ಬಸವರಾಜ ಅವರು ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷತನ ಮತ್ತು ಬೇಜವಾಬ್ದಾರಿತನ ಪ್ರದರ್ಶನ ಮಾಡಿದ್ದು, ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಇಲಾಖಾ ವಿಚಾರಣೆಯನ್ನು ಬಾಕಿ ಇಟ್ಟು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತ್ತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಪೊಲೀಸ್ ವರಿಷ್ಟಾಧಿಕಾರಿಗಳು ತಿಳಿಸಿದ್ದಾರೆ.