Sunday, July 3, 2022

Latest Posts

ಲಾಡ್ಜ್’ನಲ್ಲಿ ಬೆಂಗಳೂರು ಉದ್ಯಮಿ ಅನುಮಾನಸ್ಪದ ಸಾವು

ಹೊಸ ದಿಗಂತ ವರದಿ ಮೈಸೂರು:

ಬೆಂಗಳೂರು ಉದ್ಯಮಿಯೊಬ್ಬರು ಅನುಮಾನಸ್ಪದಾಗಿ ಮೈಸೂರಿನ ಲಾಡ್ಜ್ ಒಂದರಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.

ಉಮಾಶಂಕರ್ 45 ಮೃತರರು. ಇವರ ಜೊತೆಯಲ್ಲಿ ಬಂದಿದ್ದ ಪತ್ನಿ ಕವಿತಾ ನಾಪತ್ತೆಯಾಗಿದ್ದಾರೆ.
ಲಾಡ್ಜ್ ನಲ್ಲಿ ಇನ್ಸುಲಿನ್ ಹಾಗೂ ಔಷಧಿ ಬಾಟಲ್ ಡೆತ್‌ನೋಟ್ ಪತ್ತೆಯಾಗಿದೆ. ಪತಿ ಪತ್ನಿ ಇಬ್ಬರು ಸಹಿ ಮಾಡಿರುವ ಡೆತ್‌ನೋಟ್ ದೊರಕಿದೆ. ಅತಿಯಾದ ಇನ್ಸುಲಿನ್‌ನಿಂದ್ ಉಮಾಶಂಕರ್ ಮೃತಪಟ್ಟಿರುವ ಶಂಕೆಯಿದೆ.

ಸಾಕಷ್ಟು ಸಾಲ ಮಾಡಿದ್ದ ಉಮಾಶಂಕರ್. ಸಾಲಕ್ಕಾಗಿ ಕೆಲವರು ಪೀಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ದಂಪತಿ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.
ಸದ್ಯ ನಾಪತ್ತೆಯಾಗಿರುವ ಪತ್ನಿ ಕವಿತಾಗಾಗಿ ಹುಡುಕಾಟ ಶುರುವಾಗಿದ್ದು, ಈ ಬಗ್ಗೆ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss