Thursday, February 25, 2021

Latest Posts

ಲಾರಿಗಳ ಬ್ಯಾಟರಿ ಕಳವು: ಆರೋಪಿ ಸೆರೆ

ಹೊಸದಿಗಂತ ವರದಿ,ಮಂಗಳೂರು:

ಪಾರ್ಕ್ ಮಾಡಿದ್ದ ಲಾರಿಗಳ ಬ್ಯಾಟರಿ ಕಳವು ಮಾಡುತ್ತಿದ್ದ ಬಜಾಲ್ ನಿವಾಸಿ ಎ.ಎಂ.ಇರ್ಫಾನ್ ಯಾನೆ ಇರ್ಫಾನ್(25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ನಗರದ ಪಣಂಬೂರು ಎನ್‌ಎಂಪಿಟಿ ಯಾರ್ಡ್‌ನಲ್ಲಿ ಪಾರ್ಕ್ ಮಾಡಿದ್ದ 5 ಲಾರಿಗಳಿಂದ ಬ್ಯಾಟರಿ ಕಳವು ಮಾಡಿದ್ದು, ಈ ಕುರಿತಂತೆ ಲಾರಿ ಮಾಲಕರು ಪಣಂಬೂರು ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಸ್ಕೂಟರ್ ಹಾಗೂ ಕಳವುಗೈದ ಬ್ಯಾಟರಿ ಸೇರಿದಂತೆ ಸುಮಾರು 85,000 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!