ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನಲ್ಲಿ ಲಿಂಗಾಯತ ಸಮುದಾಯ ಭವನದ ಕಟ್ಟಡ ನಿರ್ಮಾಣದಲ್ಲಿ ಅಕ್ರಮವಾಗಿ 75 ಲಕ್ಷ ರೂಪಾಯಿ ಅನುದಾನವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಶ್ರೀ ರಾಮ ಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಆರೋಪ ಮಾಡಿದ್ದಾರೆ.
ಅವರು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಆಳಂದ ಪಟ್ಟಣದಲ್ಲಿ ನಿರ್ಮಿಸುತ್ತಿರುವ ಲಿಂಗಾಯತ ಸಮುದಾಯ ಭವನಕ್ಕೆ ಹಣವನ್ನು ತಂದು ಭವನವನ್ನು ನಿರ್ಮಿಸದೇ, ವಾಣಿಜ್ಯ ಮಳಿಗೆ ನಿರ್ಮಿಸಲಾಗಿದೆ.
ಲಿಂಗಾಯತ ಸಮುದಾಯ ಭವನಕ್ಕೆಂದು ಮೊದಲ ಕಂತಿನಲ್ಲಿ 25 ಲಕ್ಷ ರೂಪಾಯಿ ತಂದಿದ್ದು, ಆ ಹಣವನ್ನ ದುರ್ಭಳಕೆ ಮಾಡಿಕೊಂಡಿದ್ದಾರೆ. ಅದರಂತೆ ಮತ್ತೆ ಎರಡನೇ ಕಂತಿನಲ್ಲಿ 50 ಲಕ್ಷ ರೂಪಾಯಿ ತಂದು, ಆ ಹಣವನ್ನು ಸಹ ದುರುಪಯೋಗ ಪಡಿಸಿಕೊಂಡು ವೀರಶೈವ ಮಹಾ ಸಭಾ ಹಾಗೂ ಅಧಿಕಾರಿಗಳು 75 ಲಕ್ಷ ಹಣವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಂಡು ಕುಂತಿದ್ದಾರೆ ಎಂದು ಆರೋಪಿಸಿದರು.
ಲಿಂಗಾಯತ ಸಮುದಾಯ ಭವನದ ಕಟ್ಟಡ ನಿರ್ಮಿಸದೇ 75 ಲಕ್ಷ ರೂ, ಹಣವನ್ನು ಲೂಟಿ ಮಾಡಿದ ಅಖಿಲ ಭಾರತ ವೀರಶೈವ ಮಹಾ ಸಭಾ ಆಳಂದ ಹಾಗೂ ಸರ್ಕಾರಿ ಅಧಿಕಾರಗಳ ಮೇಲೆ ಕ್ರಿಮಿನಲ್ ಕೇಸ ಹಾಕಬೇಕೆಂದು ಹೇಳಿದರು.
ಭವನವನ್ನು ನಿರ್ಮಸದೇ ಇದ್ದರೂ ಸಹ ಎರಡನೇ ಕಂತಿನಲ್ಲಿ 50 ಲಕ್ಷ ಬಿಡುಗಡೆ ಮಾಡಿದ ಬಿಸಿಎಂ ಜಿಲ್ಲಾಧಿಕಾರಿ ರಮೇಶ ಸಂಗಾ ಅವರನ್ನು ಅಧಿಕಾರದಿಂದ ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿದರು. ಹಾಗೂ ದುರ್ಬಳಕೆಯಾದ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡುವಂತೆ ಆಗ್ರಹಿಸಿದರು.
ಹಣವನ್ನು ದುರ್ಬಳಕೆ ಮಾಡಿದ ಕಾರಣ ದೂರು ಸಲ್ಲಿಸಿದರು ಯಾವ ಕ್ರಮವನ್ನು ಕೈಗೊಳ್ಳದೇ ಅಧಿಕಾರಿಗಳು ಸುಮ್ಮನೆ ಕುಳಿತುಕೊಂಡಿದ್ದಾರೆ. ಇವರ ಸುಮ್ಮನೆ ಕೂಡವುದರಿಂದ ನಮಗೆ ಅನುಮಾನ ಬರುತ್ತಿದೆ. ಹೀಗಾಗಿ ಸಂಪೂರ್ಣವಾಗಿ ತನಿಖೆ ಮಾಡಿ ದುರ್ಬಳಕೆಯಾದ ಹಣವನ್ನು ವಾಪಸ್ ನೀಡದಿದ್ದರೇ, ಉಪವಾಸ್ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದರು.
ಲಕ್ಷ್ಮಿಕಾಂತ ಸ್ವಾಧಿ, ಮಲ್ಲಣಗೌಡ ಪಾಟೀಲ, ಶರಣಪ್ಪ, ಸಂತೋಷ ಬೆನಕನಳ್ಳಿ, ಮಹೇಶ ಗೊಬ್ಬುರ ಸೇರಿದಂತೆ ಹಲವರು ಇದ್ದರು.