Wednesday, July 6, 2022

Latest Posts

ಲಿಕ್ಕರ್ ಮಾಫಿಯಾ| ಕಾನ್ಸ್ ಟೇಬಲ್’ನನ್ನೇ ಹತ್ಯೆ ಗೈದ ದುಷ್ಕರ್ಮಿಗಳು: ಕಠಿಣ ಕ್ರಮಕ್ಕೆ ಸಿಎಂ ಯೋಗಿ ಆದೇಶ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಲಿಕ್ಕರ್ ಮಾಫಿಯಾವನ್ನು ಮಟ್ಟಹಾಕಲು ಹೋಗಿ ದುಷ್ಕರ್ಮಿಗಳಿಂದ ಕಾನ್ಸ್​ಟೇಬಲ್ ಓರ್ವರು ಹತ್ಯೆಯಾಗಿರುವ ಘಟನೆ  ಉತ್ತರ ಪ್ರದೇಶದ ಕಾಸ್’ಗಂಜ್ ಜಿಲ್ಲೆಯಲ್ಲಿ ನಡೆದಿದೆ.

ಈ ಪ್ರಕರಣದ ಪ್ರಮುಖ ಆರೋಪಿಯನ್ನು ಎನ್’ಕೌಂಟರ್ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕುರಿತಂತೆ ಪೊಲೀಸ್​ ವರಿಷ್ಠಾಧಿಕಾರಿ ಮನೋಜ್​ ಸೊಂಕರ್ ಮಾಹಿತಿ ನೀಡಿದ್ದು, ಪೊಲೀಸ್​ ತಂಡವೊಂದು ಲಿಕ್ಕರ್​ ಮಾಫಿಯಾ ಕಿಂಗ್​ಪಿನ್​ಗೆ ವಾರೆಂಟ್​ ನೀಡಲು ಕಾಸ್​ಗಂಜ್​ ಜಿಲ್ಲೆಯ ಗ್ರಾಮವೊಂದಕ್ಕೆ ಹೋಗಿದ್ದರು. ಆ ವೇಳೆ ದುಷ್ಕರ್ಮಿಗಳು ಕಾನ್ಸ್​ಟೇಬಲ್ ದೇವೇಂದ್ರ ಅವರನ್ನು ಹತ್ಯೆ ಮಾಡಿದ್ದು, ಎಸ್​ಐ ಅಶೋಕ್​ ಕುಮಾರ್​ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಈ ಪ್ರಕರಣದ ಪ್ರಮುಖ ಆರೋಪಿಯನ್ನು ಎನ್​ಕೌಂಟರ್​ನಲ್ಲಿ ಹೊಡೆದುರುಳಿಸಲಾಗಿದೆ. ಮತ್ತೊರ್ವ ಪರಾರಿಯಾಗಿದ್ದು, ಅವನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಮನೋಜ್​ ಸೊಂಕರ್ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮೃತ ಕಾನ್ಸ್​ಟೇಬಲ್​ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದು, ಗಾಯಾಳು ಎಸ್​ಐಗೆ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿದ್ದಾರೆ. ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss