Tuesday, July 5, 2022

Latest Posts

ಲೂಟಿ ಮಾಡೋದರಲ್ಲಿ ಡಿಕೆಶಿಗೆ ಇರುವ ಅನುಭವ ಬೇರೆ ಯಾರಿಗೂ ಇರಲ್ಲ: ಸಚಿವ ಈಶ್ವರಪ್ಪ ತಿರುಗೇಟು

ಚಿಕ್ಕಬಳ್ಳಾಪುರ: ಡಿಕೆ ಶಿವಕುಮಾರ್ ಲೂಟಿ ಮಾಡುವುದತಲ್ಲಿ ಅನುಭವಸ್ಥರು. ಎಲ್ಲೆಲ್ಲೋ ಲೂಟಿ ಮಾಡಿ ನಿಮಗೆ ಅಭ್ಯಾಸ ಇದೆಯಲ್ಲಾ ನನಗೆ ಹೇಳಿ, ನಾನು ಬಿಗಿ ಮಾಡುತ್ತೇನೆ ಎಂದು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ನರೇಗಾ ಕಾಮಗಾರಿಗಳನ್ನು ಪರಿಶೀಲಿಸಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಅವ್ಯವಹಾರ ಆಗಿದೆ. ನರೇಗಾ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಕಿದ್ದ ಬಹಿರಂಗ ಸವಾಲಿಗೆ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ನಾನು ಹೊಸದಾಗಿ ಈ ಇಲಾಖೆಗೆ ಬಂದಿದ್ದೀನೆ. ನನ್ನ ಇಲಾಖೆಯ ನರೇಗಾದಲ್ಲಿ ಎಲ್ಲೆಲ್ಲಿ ಲೂಟಿ ಆಗಿದೆ ಎಂದು ಹೇಳಿ, ನನ್ನ ಗಮನಕ್ಕೆ ಬಂದು ಒಂದು ಪೈಸೆ ಏನಾದ್ರೂ ದುರಪಯೋಗ ಆಗಿದ್ದರೆ ನಾನು ನಿಮ್ಮ ಚಾಲೆಂಜ್ ಸ್ವೀಕರಿಸುತ್ತೇನೆ ಎಂದರು. ಎಲ್ಲೆಲ್ಲಿ ಲೂಟಿ ಆಗಿದೆ ಎಂದು ಹೇಳಿ ಬಿಗಿ ಮಾಡ್ತೀನಿ ಅದು ಬಿಟ್ಟು ರಾಜಕಾರಣ ಮಾಡಬೇಡಿ. ಹೊಸದಾಗಿ ಕೆಪಿಸಿಸಿ ಅಧ್ಯಕ್ಷರಾಗಿದ್ದೀನಿ ಅಂತ ತೋರಿಸಿಕೊಳ್ಳೋಕೆ ನಾಟಕ ಮಾಡಬೇಡಿ. ನರೇಗಾದಲ್ಲೂ ಯಾಕೆ ರಾಜಕೀಯ ಮಾಡುತ್ತೀರಿ. ಜನರಿಗೆ ಕೆಲಸ ಕೊಡಬೇಕು ಎಂದು ತೀರ್ಮಾನ ಮಾಡಿದ್ದೇವೆ. ಜನ ಖುಷಿಯಿಂದ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದರು.
ನಮ್ಮ ಇಲಾಖೆ ಮಲಗಿದೆ ಎಂದು ಡಿಕೆಶಿ ಹೇಳಿದ್ದಾರೆ. ಆದರೆ ಡಿಕೆಶಿ ಎಲ್ಲೆಲ್ಲೋ ಹೋಗಿ ಮಲಗಿ ಬಂದಿದ್ರು? ನಾನು ಅದರ ಸುದ್ದಿಗೆ ಹೋಗಲ್ಲ. ನಮ್ಮ ಇಲಾಖೆ ಮಲಗಿಲ್ಲ ಅನ್ನೋದಕ್ಕೆ ನಮ್ಮ ಇಲಾಖಾಧಿಕಾರಿಗಳು ಮತ್ತು ನಾನು ಓಡಾಡ್ತಿರೋದೆ ಸಾಕ್ಷಿ, ಸುಮ್ಮನೆ ಏನೇನೋ ಹೇಳಿಕೆ ನೀಡಿ ಉತ್ತರ ಕುಮಾರನ ಪೌರುಷ ತೋರಿಸಬೇಡಿ ಎಂದು ವ್ಯಂಗ್ಯ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss