ಲಡಾಖ್: ಲೇಹ್ ಸೆಕ್ಟರ್ನಲ್ಲಿ ಹೆಚ್ಎಎಲ್ ತಯಾರಿಸಿರುವ ಎರಡು ಲಘು ಯುದ್ಧ ಹೆಲಿಕಾಪ್ಟರ್ಗಳನ್ನು ನಿಯೋಜಿಸಲಾಗಿದೆ. ಭಾರತೀಯ ವಾಯುಸೇನೆಯ ಯೋಜನೆಗಳಿಗೆ ಸಾಥ್ ನೀಡಲು ಅತ್ಯಂತ ಕಡಿಮೆ ಅವಧಿಯಲ್ಲಿ ಈ ಹೆಲಿಕಾಪ್ಟರ್ಗಳನ್ನ ನಿಯೋಜಿಸಲಾಗಿದೆ.
ಇದು ಹೆಚ್ಎಎಲ್ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರೋ, ವಿಶ್ವದಲ್ಲೇ ಅತೀ ಹಗುರವಾದ ದಾಳಿ ಹೆಲಿಕಾಪ್ಟರ್. ಭಾರತೀಯ ವಾಯುಸೇನೆಯ ನಿರ್ದಿಷ್ಟ ಹಾಗೂ ವಿಶಿಷ್ಟ ಅಗತ್ಯತೆಗಳಿಗೆ ತಕ್ಕಂತೆ ಈ ಹೆಲಿಕಾಪ್ಟರ್ ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಹೆಚ್ಎಎಲ್ ಪ್ರಮುಖ ಪಾತ್ರ ವಹಿಸಿದೆ ಎಂದು ಹೆಚ್ಎಎಲ್ನ ಅಧ್ಯಕ್ಷ ಆರ್. ಮಾಧವನ್ ಹೇಳಿದ್ದಾರೆ.
ಲಘು ಯುದ್ಧ ಹೆಲಿಕಾಪ್ಟರ್ಗಳ ಲ್ಲಿನ ಶಸ್ತ್ರಾಸ್ತ್ರಗಳು ಹಗಲು ಅಥವಾ ರಾತ್ರಿ ವೇಳೆ ಯಾವುದೇ ರೀತಿಯ ಗುರಿ ಮೇಲೆ ನಿಖರವಾಗಿ ದಾಳಿ ಮಾಡಬಲ್ಲವು. ಅಲ್ಲದೆ ವಿವಿಧ ರೀತಿಯ ಪರಿಸ್ಥಿತಿಯಲ್ಲಿ ಅತೀ ಎತ್ತರದ ಪ್ರದೇಶಕ್ಕೆ ಸಾಕಷ್ಟು ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.
ಭಾರತೀಯ ವಾಯುಸೇನೆ ಹಾಗೂ ಭಾರತ ಸೇನೆ ಎರಡಕ್ಕೂ ಸೇರಿ ಒಟ್ಟು 160 ಲಘು ಯುದ್ಧ ಹೆಲಿಕಾಪ್ಟರ್ಗಳ ಅಗತ್ಯವಿದೆ. ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ ಮೊದಲ ಬ್ಯಾಚ್ನ 15 ಹೆಲಿಕಾಪ್ಟರ್ಗಳಿಗೆ ಸಮ್ಮತಿ ನೀಡಿತ್ತು. 15 ಲಿಮಿಟೆಡ್ ಸೀರಿಸ್ ಪ್ರೊಡಕ್ಷನ್ ಹೆಲಿಕಾಪ್ಟರ್ಗಳಿಗಾಗಿ ಐಎಎಫ್ ಮನವಿ ಮಾಡಿತ್ತು(10 ಐಎಎಫ್ಗೆ, 5 ಸೇನಾಪಡೆಗೆ). ಈ ಕುರಿತು ತಾಂತ್ರಿಕ ಪರಿಶೀಲನೆ ಹಾಗೂ ಹಣಕಾಸಿನ ಮಾತುಕತೆ ಮುಗಿದಿದೆ. ಶೀಘ್ರದಲ್ಲೇ ಆರ್ಡರ್ ಬರುವ ನಿರೀಕ್ಷೆಯಿದೆ.