Wednesday, July 6, 2022

Latest Posts

ಲೇಹ್ ವಾಯುನೆಲೆಯಲ್ಲಿ ಇಲೈಯುಶಿನ್, ಸೂಪರ್ ಹರ್ಕ್ಯುಲಸ್ ವಿಮಾನ ನಿಯೋಜಿಸಿದ ಭಾರತೀಯ ವಾಯುಸೇನೆ

ಲೇಹ್: ಭಾರತ ಹಾಗೂ ಚೀನಾ ಉಭಯ ದೇಶಗಳ ನಡುವಿನ ಉದ್ವಿಗ್ನತೆಯ ನಡುವೆ, ಲೇಹ್ ವಾಯುನೆಲೆಯಲ್ಲಿ ಭಾರತೀಯ ವಾಯುಸೇನೆಯು ಸಿ-17ಎಸ್, ಇಲೈಯುಶಿನ್-76s ಮತ್ತು C-130J ಸೂಪರ್ ಹರ್ಕ್ಯುಲಸ್ ವಿಮಾನಗಳನ್ನು ನಿಯೋಜಿಸಿದೆ.
ಈ ಯುದ್ಧ ವಿಮಾನಗಳು ಹಗಲು ರಾತ್ರಿ ಗಸ್ತು ತಿರುಗುತ್ತಿವೆ. ಇದಲ್ಲದೇ ಈ ಪ್ರದೇಶದಲ್ಲಿರುವ ನಿಯೋಜಿತ ಸೈನಿಕರಿಗೆ ಪಡಿತರ ವನ್ನು ಸಹ ಪೂರೈಸಲಾಗುತ್ತಿದೆ.
ಲಡಾಕ್ ವಲಯದಲ್ಲಿ ಭಾರತೀಯ ಭೂ ಸೇನೆ ಮತ್ತು ವಾಯುಪಡೆ ಗಳು ಹಗಲು ರಾತ್ರಿ ಶತ್ರುಗಳ ಮೇಲೆ ಕಣ್ಣಿಟ್ಟಿಟಿದ್ದು. ಈ ನಡುವೆ ಎರಡೂ ಸೇನೆಗಳು ಚೀನಾ ಸೇನೆಯ ವಿರುದ್ಧ ಜಂಟಿಯಾಗಿ ಯುದ್ಧಮಾಡಲು ಸಿದ್ಧತೆ ನಡೆಸಿವೆ .
ಮಾಧ್ಯಮ ಜೊತೆ ಮಾತನಾಡಿದ ವಾಯುಪಡೆಯ ಹಿರಿಯ ಕಮಾಂಡರ್ , ಲಡಾಖ್ ಪ್ರದೇಶದಲ್ಲಿ ನಿಯೋಜಿಸಲ್ಪಟ್ಟ ಸೇನೆ ಮತ್ತು ಇತರ ಭದ್ರತಾ ಪಡೆಗಳಿಗೆ ಅಗತ್ಯವಿರುವ ಯಾವುದೇ ಅಗತ್ಯಗಳನ್ನು ಪೂರೈಸಲು ವಾಯುಪಡೆ ಕೇಂದ್ರ ಕಚೇರಿಯಿಂದ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಲಡಾಕ್ ಗಡಿ ಭಾಗದಲ್ಲಿ ಭಾರತೀಯ ಸೇನೆ ಚೀನಾ ಸೇನೆಗೆ ದೃಷ್ಟಿ ಮಿಲಾಯಿಸುವಷ್ಟು ಮಟ್ಟಿಗೆ ಸನ್ನದ್ಧವಾಗಿದೆ. ಇನ್ನು , ಪಾಕಿಸ್ತಾನದ ಗಡಿ ಭಾಗದಲ್ಲಿ ಗರಿಷ್ಠ ನಿಗಾವಹಿಸಲಾಗುತ್ತಿದ್ದು, ಪಾಕ್​ ಸೇನೆಯ ಪ್ರತಿ ಪ್ರಚೋದನಕಾರಿ ನಡೆಗೆ ಅದೇ ರೀತಿಯ ಪ್ರತ್ಯುತ್ತರ ನೀಡಲಾಗುತ್ತಿದೆ. ಚಿನೂಕ್, ಅಪ್ಪಾಚೆ, Mi-17V5s ಹೆಲಿಕಾಪ್ಟರ್​ಗಳು ಗಡಿ ಭಾಗದಲ್ಲಿ ಹಾರಾಟ ನಡೆಸಿದ್ದು, ಸೂಕ್ಷ್ಮ ಸನ್ನಿವೇಶದಲ್ಲಿ ಸೇನೆಯ ನೆರವಿಗೆ ಧಾವಿಸುತ್ತದೆ ಎಂದು ಅವರು ತಿಳಿಸಿದ್ದಾರೆ ಎಂದು ಆಂಗ್ಲ ಸುದ್ದಿಮಾದ್ಯಮ ವರದಿಯೊಂದು ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss