Tuesday, August 9, 2022

Latest Posts

ಲೈಂಗಿಕ ದೌರ್ಜನ್ಯ ಆರೋಪ: ಪೂನಂ ಪಾಂಡೆ ಪತಿ ಸ್ಯಾಮ್‌ ಅಹ್ಮದ್‌ಗೆ ಷರತ್ತುಬದ್ಧ ಜಾಮೀನು

ಪಣಜಿ: ನಟಿ ಪೂನಂ ಪಾಂಡೆ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ಗೋವಾ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಆಕೆಯ ಪತಿ ಸ್ಯಾಮ್‌ ಅಹ್ಮದ್‌ಗೆ ಗೋವಾದ ಪ್ರಥಮದರ್ಜೆ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ.
ಗೋವಾದ ಪ್ರಥಮ ದರ್ಜೆ ನ್ಯಾಯಾಲಯ 20 ಸಾವಿರ ರೂಪಾಯಿಯ ಭದ್ರತೆ ಆಧಾರದ ಮೇಲೆ ಷರತ್ತುಬದ್ಧ ಜಾಮೀನು ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ರಾತ್ರಿ ನನ್ನ ಪತಿ ದೌರ್ಜನ್ಯ ಎಸಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೂನಂ ಪೊಲೀಸರಿಗೆ ದೂರು ನೀಡಿದ್ದರು. ಹಾಗಾಗಿ, ಸ್ಯಾಮ್‌ ಅವರನ್ನು ಪೊಲೀಸರು ಬಂಧಿಸಿದ್ದರು.
ಬುಧವಾರದಿಂದ ನಾಲ್ಕು ದಿನಗಳ ಕಾಲ ಕಾನಕೋನಾ ಠಾಣೆಗೆ ಭೇಟಿ ನೀಡಬೇಕು ಎಂದು ಕೋರ್ಟ್ ಸ್ಯಾಮ್ ಗೆ ಸೂಚಿಸಿದೆ. ಅಲ್ಲದೇ ಸಾಕ್ಷ್ಯ ನಾಶಕ್ಕೆ ಮುಂದಾಗಬಾರದು ಎಂದು ತಿಳಿಸಿದೆ. ನಟಿ ಪೂನಂ ಪಾಂಡೆ ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕೆಂದು ಕೋರ್ಟ್ ನಿರ್ದೇಶನ ನೀಡಿದೆ.
ಈ ಇಬ್ಬರು ಕಳೆದ ಎರಡು ವರ್ಷಗಳಿಂದಲೂ ಲಿವ್‌ ಇನ್‌ ರಿಲೇಷನ್‌ನಲ್ಲಿದ್ದರು. ಕಳೆದ ಜುಲೈನಲ್ಲಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸೆಪ್ಟೆಂಬರ್‌ 10ರಂದು ಕುಟುಂಬದ ಸದಸ್ಯರ ಸಮ್ಮುಖದಲ್ಲಿಯೇ ಇಬ್ಬರೂ ಸಪ್ತಪದಿ ತುಳಿದಿದ್ದರು.
ಪ್ರಸ್ತುತ ಪೂನಂ ದಕ್ಷಿಣ ಗೋವಾದ ಕೊನಕೋನಾ ಪ್ರದೇಶದಲ್ಲಿ ನಡೆಯುತ್ತಿರುವ ಸಿನಿಮಾದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss