Sunday, August 14, 2022

Latest Posts

ಲೋಕಸಭೆಯಲ್ಲಿ ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ ಮಂಡಿಸಿದ ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ: ಲೋಕಸಭೆಯಲ್ಲಿ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020ರ ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ ಅಂಗೀಕರಿಸುವ ನಿರ್ಣಯವನ್ನು ಮಂಡಿಸಿದ್ದಾರೆ.
ಠೇವಣಿದಾರರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಾವು ಈ ತಿದ್ದುಪಡಿ ತರುತ್ತಿದ್ದೇವೆ ಎಂದು ಸೀತಾರಾಮನ್ ಅವರು ಹೇಳಿದರು. ಬ್ಯಾಂಕ್​ಗಳಲ್ಲಿನ ಕೆಲವು ದುರದೃಷ್ಟಕರ ಪರಿಸ್ಥಿತಿಯಿಂದಾಗಿ ಠೇವಣಿದಾರರು ಆಗಾಗ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. 277 ನಗರ ಸಹಕಾರಿ ಬ್ಯಾಂಕ್​ಗಳ ಆರ್ಥಿಕ ಸ್ಥಿತಿ ತೀರಾ ದುರ್ಬಲವಾಗಿದೆ ಎಂದರು.
ಈ ಮಸೂದೆ 1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲು ಯತ್ನಿಸುತ್ತಿದ್ದು, ದೇಶದ 105 ಸಹಕಾರಿ ಬ್ಯಾಂಕ್​ಗಳು ಕನಿಷ್ಠ ನಿಯಂತ್ರಕ ಬಂಡವಾಳದ ಅಗತ್ಯವನ್ನೂ ಪೂರೈಸಲು ಸಹ ಸಾಧ್ಯವಾಗುತ್ತಿಲ್ಲ. 47 ಬ್ಯಾಂಕ್​ಗಳು ನಿವ್ವಳ ಮೌಲ್ಯ ಋಣಾತ್ಮಕವಾಗಿದೆ. 328 ನಗರ ಸಹಕಾರಿ ಬ್ಯಾಂಕ್​ಗಳು ಶೇ 15ಕ್ಕಿಂತ ಅಧಿಕ ಎನ್‌ಪಿಎ ಅನುಪಾತ ಹೊಂದಿವೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss