Monday, August 8, 2022

Latest Posts

ಲೋಧಿ ಎಸ್ಟೇಟ್ ನ ಸರ್ಕಾರಿ ಬಂಗಲೆ ತೊರೆದ ಪ್ರಿಯಾಂಕ ಗಾಂಧಿ

ಹೊಸದಿಲ್ಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ದೆಹಲಿಯ ಐಷಾರಾಮಿ ಲುಟಿಯೆನ್ಸ್ ಪ್ರದೇಶದ ಲೋಧಿ ಎಸ್ಟೇಟ್ 35 ರಲ್ಲಿ ಸರ್ಕಾರ ನಿಗದಿಪಡಿಸಿದ ಬಂಗಲೆ ಖಾಲಿ ಮಾಡಿದ್ದಾರೆ.

ಎಸ್‌ಪಿಜಿ ಭದ್ರತಾ ವ್ಯಾಪ್ತಿಯನ್ನು ಕಳೆದುಕೊಂಡ ನಂತರ ಸರ್ಕಾರಿ ನಿಯೋಜಿತ ಬಂಗಲೆಯಲ್ಲಿ ವಾಸಿಸಲು ಅರ್ಹರಲ್ಲ ಎಂದು ಹೇಳಲಾಗಿತ್ತು. ಆಗಸ್ಟ್ 1 ರೊಳಗೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಈ ಬಂಗಲೆ ಖಾಲಿ ಮಾಡುವಂತೆ ಪ್ರಿಯಾಂಕಾ ಅವರನ್ನು ಕೇಳಲಾಗಿತ್ತು. ಈ ಹಿನ್ನಲೆ ಪ್ರಿಯಾಂಕ ಅವರು ಸರ್ಕಾರಿ ಬಂಗಲೆಯನ್ನು ಜುಲೈ 30 ರಂದು ತೊರೆದಿದ್ದಾರೆ.

ಈ ವಿಷಯದ ಬಗ್ಗೆ ರಾಜಕೀಯ ಆಕ್ರೋಶವನ್ನು ಸೃಷ್ಟಿಸಲು ಕಾಂಗ್ರೆಸ್ ನಾಯಕರು ಸಾಕಷ್ಟು ಪ್ರಯತ್ನಿಸಿದ್ದರೂ, ಪ್ರಿಯಾಂಕಾ ಅವರು ಆದೇಶಗಳಿಗೆ ಬದ್ಧರಾಗಿರುವುದಾಗಿ ಹೇಳಿದ್ದಾರೆ. ಸರ್ಕಾರಿ ಬಂಗಲೆ ಈಗ ಬಿಜೆಪಿ ಸಂಸದ ಅನಿಲ್ ಬಲೂನಿಗೆ ಹಂಚಿಕೆ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss